ನಟ ಪ್ರಭಾಸ್ ಸಂಜಯ್ ಲೀಲಾ ಬನ್ಸಾಲಿರವರ ‘ಪದ್ಮಾವತ್’ ಚಿತ್ರದ ಆಫರ್ ನಿರಾಕರಿಸಿದ್ಯಾಕೆ ಗೊತ್ತಾ?

ಹೈದರಾಬಾದ್| pavithra| Last Modified ಬುಧವಾರ, 15 ಆಗಸ್ಟ್ 2018 (12:08 IST)
ಹೈದರಾಬಾದ್ : ಟಾಲಿವುಡ್ ನ ಸೂಪರ್ ಸ್ಟಾರ್ ಪ್ರಭಾಸ್ ಅವರಿಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಾಲಿವುಡ್ ಸೂಪರ್ ಹಿಟ್ ಸಿನಿಮಾ ಪದ್ಮಾವತ್ ನಲ್ಲಿ ನಟಿಸುವ ಅವಕಾಶ ಒದಗಿಬಂದಿದ್ದರೂ ಅದನ್ನು ಪ್ರಭಾಸ್ ನಿರಾಕರಿಸಿದ್ದರಂತೆ.

ಹೌದು. ಪ್ರಭಾಸ್ ನಟಿಸಿದ ಟಾಲಿವುಡ್ ನ ಸೂಪರ್ ಹಿಟ್ ಸಿನಿಮಾ ಬಾಹುಬಲಿಯಲ್ಲಿ ಪ್ರಭಾಸ್ ಅಭಿನಯವನ್ನು ಕಂಡು ಇಡೀ ಚಿತ್ರರಂಗವೇ ಹಾಡಿ ಹೊಗಳಿತ್ತು.
ಈ ಚಿತ್ರವನ್ನು ವೀಕ್ಷಣೆ ಮಾಡಿದ್ದ ಸಂಜಯ್ ಲೀಲಾ ಬನ್ಸಾಲಿ, ಕೂಡ ನಟ ಪ್ರಭಾಸ್ ನಟನೆಗೆ ಮಾರು ಹೋಗಿದ್ದರಂತೆ. ಹಾಗಾಗಿ ಅವರು ‘ಪದ್ಮಾವತ್' ಚಿತ್ರದಲ್ಲಿ ನಟಿಸಲು ಪ್ರಭಾಸ್ ಗೆ ಆಫರ್ ನೀಡಿದ್ದರಂತೆ. ರಾಣಿಯಾಗಿ ದೀಪಿಕಾ, ಖಿಲ್ಜಿಯಾಗಿ ರಣವೀರ್ ಸಿಂಗ್ ಮೊದಲೇ ಫೈನಲ್ ಆಗಿದ್ದರಿಂದ ಮಹಾರಾವಲ್ ರತನ್ ಸಿಂಗ್ ಪಾತ್ರಕ್ಕೆ ಆಫರ್ ನೀಡಿದ್ದರಂತೆ.


ಸಂಜಯ್ ಲೀಲಾ ಬನ್ಸಾಲಿಯಂತಹ ದೊಡ್ಡ ನಿರ್ದೇಶಕರ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದ, ಪ್ರಭಾಸ್ ಆರಂಭದಲ್ಲಿ ಒಪ್ಪಿಗೆ ನೀಡಿದ್ದರಂತೆ. ಆದರೆ ಕಥೆ ಕೇಳಿ ಪಾತ್ರ ನಿರಾಕರಿಸಿದ್ದಾರಂತೆ. ಕಾರಣ ಬಾಹುಬಲಿ ನಂತರ ದೇಶ-ವಿದೇಶಗಳಲ್ಲಿ ಹೆಸರು ಮಾಡಿರುವ ಪ್ರಭಾಸ್, ಪದ್ಮಾವತ್ ಚಿತ್ರದ ಪಾತ್ರ ತನ್ನ ಯಶಸ್ಸಿಗೆ ಹಿನ್ನೆಡೆಯಾಗಲಿದೆ ಎಂದು ಭಾವಿಸಿ ಚಿತ್ರ ಕೈಬಿಟ್ಟಿದ್ದಾರೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :