ದೇಶದಲ್ಲಿ 43,263 ಸೋಂಕು ದೃಢ; 338 ಮಂದಿ ಬಲಿ

ನವದೆಹಲಿ| Ramya kosira| Last Modified ಗುರುವಾರ, 9 ಸೆಪ್ಟಂಬರ್ 2021 (11:41 IST)
ದೇಶದಲ್ಲಿ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿಯೇ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಒಂದು ದಿನದಲ್ಲಿ 43,263 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 338 ಮಂದಿ ಮೃತಪಟ್ಟಿದ್ದಾರೆ.
ಗುರುವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 3,31,39,381ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 4,41,749ಕ್ಕೆ ಜಿಗಿತ ಕಂಡಿದೆ. ಒಂದು ದಿನದಲ್ಲಿ 40,567 ಮಂದಿ ಗುಣಮುಖಿತರಾಗಿದ್ದು, ಒಟ್ಟಾರೆ ಗುಣಮುಖಿತರ ಸಂಖ್ಯೆ 3,23,04,618ಕ್ಕೆ ಏರಿಕೆಯಾಗಿದೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 3,39,614ಕ್ಕೆ ಏರಿದೆ.>  >


ಇದರಲ್ಲಿ ಇನ್ನಷ್ಟು ಓದಿ :