ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ನೌಕರನಿಗೆ ಕೊರೋನಾ: ಆತಂಕದಲ್ಲಿ ಕಪೂರ್ ಕುಟುಂಬ

ಮುಂಬೈ| Krishnaveni K| Last Modified ಬುಧವಾರ, 20 ಮೇ 2020 (09:10 IST)
ಮುಂಬೈ: ಬಾಲಿವುಡ್ ನಿರ್ಮಾಪಕ, ದಿವಂಗತ ನಟಿ ಶ್ರೀದೇವಿ ಪತಿ ಬೋನಿ ಕಪೂರ್ ಮನೆ ಕೆಲಸದಾತನಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.
 

ಬೋನಿ ಕಪೂರ್ ಮನೆಯಲ್ಲಿ ನೌಕರಿ ಮಾಡುತ್ತಿದ್ದ 23 ವರ್ಷ ಯುವಕನಿಗೆ ಸೋಂಕು ಇರುವುದು ದೃಢಪಟ್ಟಿದೆ. ಕಳೆದ ಶನಿವಾರದಿಂದ ಅಸ್ವಸ್ಥನಾಗಿದ್ದ ಈತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬೋನಿ ಕಪೂರ್ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
 
ನನಗೆ ಮತ್ತು ಮಕ್ಕಳಾದ ಜಾಹ್ನವಿ, ಖುಷಿ ಕಪೂರ್ ಗೆ ಯಾವುದೇ ಅಪಾಯವಿಲ್ಲ. ನಾವು ಸುರಕ್ಷಿತರಾಗಿದ್ದೇವೆ. ಹಾಗಿದ್ದರೂ ತಕ್ಕ ಸುರಕ್ಷಿತಾ ಕ್ರಮ ಕೈಗೊಂಡಿದ್ದೇವೆ ಎಂದು ಬೋನಿ ಕಪೂರ್ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :