ಡೆಡ್ಲಿ ಕೊರೊನಾದಿಂದ ಜನಪ್ರಿಯ ಡಾಕ್ಟರ್ ಸಾವು

ಕೆ.ಆರ್.ಪೇಟೆ| Jagadeesh| Last Updated: ಬುಧವಾರ, 29 ಜುಲೈ 2020 (12:56 IST)
ಡೆಡ್ಲಿ ಕೊರೊನಾದಿಂದಾಗಿ ವೈದ್ಯರೊಬ್ಬರು ಸಾವನ್ನಪ್ಪಿದ್ದಾರೆ.

ಕೆ.ಆರ್.ಪೇಟೆ ಪಟ್ಟಣದಲ್ಲಿ ವಾತ್ಸಲ್ಯ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ ಜನಪ್ರಿಯ ವೈದ್ಯರಾದ ಡಾ.ಪ್ರಕಾಶ್(62)  ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೃಷ್ಣರಾಜಪೇಟೆ ಪಟ್ಟಣದ  ಶ್ರವಣಬೆಳಗೊಳ ರಸ್ತೆಯ ದುರ್ಗಾ ಭವನ್ ಸರ್ಕಲ್ ನಲ್ಲಿರುವ ವೈದ್ಯರ ಕ್ಲಿನಿಕ್, ಮೆಡಿಕಲ್ ಸ್ಟೋರ್ ಅನ್ನು ಸೀಲ್ ಡೌನ್ ಮಾಡಲಾಗಿತ್ತು.

ಜನಸಾಮಾನ್ಯರ ಆರೋಗ್ಯವನ್ನು ಕಾಪಾಡುತ್ತಿದ್ದ ವೈದ್ಯರೇ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ ಬಲಿಯಾಗಿರುವುದು ಪಟ್ಟಣದ ಜನತೆಯಲ್ಲಿ ಆತಂಕ ಮೂಡಿಸಿದೆ.


ಇದರಲ್ಲಿ ಇನ್ನಷ್ಟು ಓದಿ :