ಬೆಂಗಳೂರು: ಕೊರೋನಾ ಎಲ್ಲರಲ್ಲೂ ಹಲವು ಲಕ್ಷಣಗಳನ್ನು ಹೊತ್ತು ತರುವುದಿಲ್ಲ. ಉದಾಹರಣೆಗೆ ನಟಿ ಐಶ್ವರ್ಯಾ ರೈಯನ್ನೇ ತೆಗೆದುಕೊಳ್ಳಿ. ಅವರಲ್ಲಿ ಯಾವುದೇ ಲಕ್ಷಣಗಳಿಲ್ಲದೇ ಇದ್ದರೂ ಕೊರೋನಾ ಇರುವುದು ದೃಢಪಟ್ಟಿತ್ತು. ಇಂತಹ ರೋಗಿಗಳು ಮನೆಯಲ್ಲಿಯೇ ಯಾವ ರೀತಿ ಕಾಳಜಿ ವಹಿಸಿಕೊಳ್ಳಬಹುದು ನೋಡೋಣ. ಆದಷ್ಟು ಬಿಸಿ ನೀರು ಅಥವಾ ಪಾನೀಯ ಸೇವಿಸುತ್ತಾ ಇರಬೇಕು. ಪೋಷಕಾಂಶಯುಕ್ತ ಆಹಾರ, ಅಧಿಕ ತರಕಾರಿ, ಹಣ್ಣುಗಳ ಸೇವನೆ ಮಾಡಿ. ತಿಂದ ತಟ್ಟೆ, ಲೋಟಗಳನ್ನು ಬಿಸಾಡುವಾಗ ಎಚ್ಚರಿಕೆ ವಹಿಸುವುದು. (ಆದಷ್ಟು ಯೂಸ್ ಆಂಡ್