ಐಪಿಎಲ್ ನಲ್ಲಿ ಆಡುತ್ತಿರುವ ತಮ್ಮ ದೇಶದ ಕ್ರಿಕೆಟಿಗನ ಬಗ್ಗೆ ಅಫ್ಘನ್ ಅಧ್ಯಕ್ಷರಿಂದ ಪ್ರಧಾನಿ ಮೋದಿಗೆ ಖಡಕ್ ಸಂದೇಶ!

ನವದೆಹಲಿ, ಶನಿವಾರ, 26 ಮೇ 2018 (09:40 IST)

ನವದೆಹಲಿ: ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಫೈನಲ್ ಗೇರಲು ಏಕಾಂಗಿ ವೀರನಂತೆ ಹೋರಾಡಿದವರು ಅಫ್ಘಾನಿಸ್ತಾನ ಮೂದಲ ರಶೀದ್ ಖಾನ್. ಈ ಪ್ರತಿಭಾವಂತನ ಆಲ್ ರೌಂಡರ್ ಪ್ರದರ್ಶನದಿಂದಾಗಿ ಹೈದರಾಬಾದ್ ತಂಡ ಈ ಆವೃತ್ತಿಯ ಐಪಿಎಲ್ ಫೈನಲ್ ಗೇರಿದೆ.
 
ಹೈದರಾಬಾದ್ ತಂಡ ಪೈಪೋಟಿ ಮೊತ್ತ ಕಲೆ ಹಾಕಲು ಹೆಣಗಾಡುತ್ತಿದ್ದಾಗ ಕ್ರೀಸ್ ಗೆ ಬಂದ ರಶೀದ್ ಎರಡು ಸಿಕ್ಸರ್ ಗಳೊಂದಿಗೆ 10 ಬಾಲ್ ಗಳಲ್ಲಿ 34 ರನ್ ಸಿಡಿಸಿ ತಂಡದ ಮೊತ್ತವನ್ನು 174 ಕ್ಕೆ ಏರಿಕೆ ಮಾಡಿದ್ದರು.
 
ನಂತರ ಕೋಲ್ಕೊತ್ತಾ ನೈಟ್ ರೈಡರ್ಸ್ 90 ರನ್ ಗಳಿಗೆ 2 ವಿಕೆಟ್ ಉರುಳಿಸಿಕೊಂಡಿದ್ದಾಗ ಮತ್ತೆ ಬಾಲ್ ಮೂಲಕ ಕಮಾಲ್ ಮಾಡಿದ ರಶೀದ್ ಖಾನ್ ಎರಡು ವಿಕೆಟ್ ಕ್ವಿಕ್ ಆಗಿ ಪಟಾಯಿಸಿದ್ದಲ್ಲದೆ, ಒಂದು ರನೌಟ್ ಮಾಡಿ ಎದುರಾಳಿಗಳ ಕುಸಿತಕ್ಕೆ ಕಾರಣರಾದರು.’
 
ಅವರ ಈ ಹೀರೋ ಪ್ರದರ್ಶನಕ್ಕೆ ಮನಸೋತ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಟ್ವೀಟ್ ಮಾಡಿದ್ದು, ‘ನಮ್ಮ ಹೀರೋ ರಶೀದ್ ಬಗ್ಗೆ ಹೆಮ್ಮೆಯಿದೆ. ಆತನಿಗೆ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಕೊಟ್ಟ ಭಾರತೀಯ ಸ್ನೇಹಿತರಿಗೆ ಧನ್ಯವಾದ. ಆದರೆ ಯಾವುದೇ ಕಾರಣಕ್ಕೂ ಆತನನ್ನು ನಿಮಗೆ ಬಿಟ್ಟುಕೊಡೆವು ನರೇಂದ್ರ ಮೋದಿ’ ಎಂದು ಪ್ರಧಾನಿ ಮೋದಿಗೆ ತಮಾಷೆಯಾಗಿ ಎಚ್ಚರಿಕೆ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್: ಕೂದಲೆಳೆಯ ಅಂತರದಲ್ಲಿ ಫೈನಲ್ ಛಾನ್ಸ್ ಕಳೆದುಕೊಂಡ ಕೆಕೆಆರ್

ಕೋಲ್ಕೊತ್ತಾ: ಈ ಐಪಿಎಲ್ ಆವೃತ್ತಿಯ ಮೊದಲ ಪಂದ್ಯದಿಂದಲೂ ಅದ್ಭುತವಾಗಿಯೇ ಆಡಿದ್ದ ಕೋಲ್ಕೊತ್ತಾ ನೈಟ್ ...

news

ವಿರಾಟ್ ಕೊಹ್ಲಿ ಬಗ್ಗೆ ಕೇಳಿದರೆ ಕೋಚ್ ರವಿಶಾಸ್ತ್ರಿಗೆ ಇಷ್ಟೊಂದು ಸಿಟ್ಟು ಬಂದಿದ್ದೇಕೆ?!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯಿಂದಾಗಿ ಕೌಂಟಿ ಕ್ರಿಕೆಟ್ ಆಡುವುದರಿಂದ ಹಿಂದೆ ...

news

ಕೆಎಲ್ ರಾಹುಲ್ ಕೊಟ್ಟ ಸವಾಲು ಪೂರ್ತಿ ಮಾಡ್ತಾರಾ ಸ್ನೇಹಿತರು?!

ಬೆಂಗಳೂರು: ಕನ್ನಡಿಗ, ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮ ನಾಯಕ ವಿರಾಟ್ ಕೊಹ್ಲಿ ನೀಡಿದ ಫಿಟ್ ...

news

ಆರ್ ಸಿಬಿ ಅಭಿಮಾನಿಗಳ ಕ್ಷಮೆ ಕೇಳಿದ ವಿರಾಟ್ ಕೊಹ್ಲಿ

ಮುಂಬೈ: ಈ ಆವೃತ್ತಿಯಲ್ಲಿ ಕಪ್ ನಮ್ದೇ ಎಂದು ಆರಂಭದಲ್ಲೇ ಜಾಹೀರಾತು ನೀಡುತ್ತಿದ್ದ ರಾಯಲ್ ಚಾಲೆಂಜರ್ಸ್ ...