Widgets Magazine

ಧೋನಿ ನಿವೃತ್ತಿ ಯಾವಾಗ ಬೇಕಾದ್ರೂ ಆಗ್ಲಿ ಆದ್ರೆ ಗೌರವಯುವ ವಿದಾಯ ಕೊಡಿ ಎಂದ ಅನಿಲ್ ಕುಂಬ್ಳೆ

ಮುಂಬೈ| Krishnaveni K| Last Modified ಸೋಮವಾರ, 9 ಸೆಪ್ಟಂಬರ್ 2019 (10:55 IST)
ಮುಂಬೈ: ಭಾರತೀಯ ಕ್ರಿಕೆಟ್ ಗಾಗಿ ಎಷ್ಟೇ ಕೊಡುಗೆ ನೀಡಿದ್ದರೂ ಗೌರವಯುತವಾಗಿ ವಿದಾಯ ಸಿಗುವ ಭಾಗ್ಯ ಸಿಕ್ಕಿರುವುದು ಕೆಲವೇ ಕ್ರಿಕೆಟಿಗರಿಗೆ ಮಾತ್ರವೇ. ಧೋನಿಗೂ ಇದೇ ಗತಿ ಬಾರದಿರಲಿ ಎಂದು ಮಾಜಿ ನಾಯಕ ಅನಿಲ್ ಕುಂಬ್ಳೆ ಹೇಳಿದ್ದಾರೆ.

 
ಇತ್ತೀಚೆಗೆ ಧೋನಿ ನಿವೃತ್ತಿ ಬಗ್ಗೆ ಕೇಳಿಬರುತ್ತಿರುವ ಒತ್ತಾಯಗಳ ಬಗ್ಗೆ ಪ್ರತಿಕ್ರಿಯಿಸಿರುವ ಕುಂಬ್ಳೆ ‘ಧೋನಿ ಜತೆಗೆ ಕೂತು ಈ ಬಗ್ಗೆ ಮಾತನಾಡಬೇಕು. ಒಂದು ವೇಳೆ ಅವರು ಮುಂಬರುವ ಟಿ20 ವಿಶ್ವಕಪ್ ನಲ್ಲಿ ಆಡುವುದಿದ್ದರೆ ಅವರಿಗೆ ಈಗ ಹೆಚ್ಚು ಟಿ20 ಪಂದ್ಯಗಳನ್ನಾಡಲು ಅವಕಾಶ ಕೊಡಬೇಕು’ ಎಂದು ಕುಂಬ್ಳೆ ಅಭಿಪ್ರಾಪಟ್ಟಿದ್ದಾರೆ.
 
ಅಷ್ಟೇ ಅಲ್ಲ, ಒಂದು ವೇಳೆ ಧೋನಿ ನಿವೃತ್ತಿಯಾಗುವುದಿದ್ದರೆ ಅವರಿಗೆ ಗೌರವಯುತ ವಿದಾಯ ನೀಡಬೇಕು ಎಂದು ಕುಂಬ್ಳೆ ಆಗ್ರಹಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :