Widgets Magazine

ಟೀಂ ಇಂಡಿಯಾ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಬಾಂಗ್ಲಾ ಪ್ರಧಾನಿ ಹಾಜರು, ಪ್ರಧಾನಿ ಮೋದಿ ಗೈರು

ಕೋಲ್ಕೊತ್ತಾ| Krishnaveni K| Last Modified ಗುರುವಾರ, 31 ಅಕ್ಟೋಬರ್ 2019 (09:51 IST)
ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಕೋಲ್ಕೊತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯಲಿರುವ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅತಿಥಿಯಾಗಿ ಆಗಮಿಸಲಿದ್ದಾರೆ.

 
ಈ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಭಾರತೀಯ ಪ್ರಧಾನಿ ಮೋದಿಗೂ ಬೆಂಗಾಳ ಕ್ರಿಕೆಟ್ ಅಸೋಸಿಯೇಷನ್ ವಿಶೇಷ ಆಹ್ವಾನವಿತ್ತಿದೆ. ಆದರೆ ಅನಿವಾರ್ಯ ಕಾರಣಗಳಿಂದ ಪ್ರಧಾನಿ ಮೋದಿಗೆ ಈ ಪಂದ್ಯಕ್ಕೆ ಹಾಜರಾಗಲು ಸಾಧ‍್ಯವಾಗುತ್ತಿಲ್ಲ.
 
ಆದರೆ ಬಾಂಗ್ಲಾ ಪ್ರಧಾನಿ ಬಿಸಿಸಿಐ ಅಧ್ಯಕ್ಷ ಗಂಗೂಲಿಯಿಂದ ನನಗೆ ಆಹ್ವಾನ ಬಂದಿದ್ದು ನಿಜ. ಅವರು ಬಂಗಾಳಿ. ಹೀಗಾಗಿ ಅವರ ಆಹ್ವಾನವನ್ನು ನಾನು ಸ್ವೀಕರಿಸಿದ್ದೇನೆ ಎಂದಿದ್ದಾರೆ. ಹೀಗಾಗಿ ಶೇಖ್ ಹಸೀನಾ ಐತಿಹಾಸಿಕ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಆಗಮಿಸುತ್ತಿರುವುದು ಪಕ್ಕಾ ಆಗಿದೆ.
ಇದರಲ್ಲಿ ಇನ್ನಷ್ಟು ಓದಿ :