Widgets Magazine

ದೆಹಲಿ ಮೈದಾನದ ಬಗ್ಗೆ ಬಾಂಗ್ಲಾ ಕ್ರಿಕೆಟ್ ಕೋಚ್ ಅಪಸ್ವರ

ನವದೆಹಲಿ| Krishnaveni K| Last Modified ಶನಿವಾರ, 2 ನವೆಂಬರ್ 2019 (07:59 IST)
ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಾಳೆ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಆದರೆ ಇದಕ್ಕೂ ಮೊದಲೇ ಬಾಂಗ್ಲಾ ಕೋಚ್ ಇಲ್ಲಿನ ಪರಿಸ್ಥಿತಿ ಬಗ್ಗೆ ಅಪಸ್ವರವೆತ್ತಿದ್ದಾರೆ.

 
ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದೆ. ಹೊಗೆಯುಕ್ತ ವಾತಾವರಣದಿಂದಾಗಿ ಆಟಗಾರರು ಮಾಸ್ಕ್ ಧರಿಸಿ ಅಭ್ಯಾಸ ನಡೆಸುತ್ತಿದ್ದಾರೆ. ಹೀಗಾಗಿ ಬಾಂಗ್ಲಾ ಕೋಚ್ ರಸೆಲ್ ಡೊಮಿಂಗೊ ಇಲ್ಲಿ ಪರಿಸ್ಥಿತಿ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 
ದೆಹಲಿಯ ಪರಿಸ್ಥಿತಿ ಆಟಕ್ಕೆ ಚೆನ್ನಾಗಿದೆ. ಇಲ್ಲಿ ಹೆಚ್ಚು ಗಾಳಿಯೂ ಇಲ್ಲ, ಬಿಸಿಲೂ ಇಲ್ಲ. ಆದರೆ ಇಲ್ಲಿನ ವಾತಾವರಣ ಕಳವಳಕಾರಿಯಾಗಿದೆ. ಆದರೆ ನಾವು ಈ ಪರಿಸ್ಥಿತಿಯನ್ನು ಮೀರಿ ಆಡಬೇಕಿದೆ ಎಂದು ಡೊಮಿಂಗೊ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :