Widgets Magazine

ಅರ್ಜುನ ಪ್ರಶಸ್ತಿಗೆ ಬಿಸಿಸಿಐ ಶಿಫಾರಸ್ಸು ಮಾಡಿದ ಆ ನಾಲ್ವರು ಕ್ರಿಕೆಟಿಗರು ಯಾರು?

ಮುಂಬೈ| Krishnaveni K| Last Modified ಭಾನುವಾರ, 28 ಏಪ್ರಿಲ್ 2019 (09:08 IST)
ಮುಂಬೈ: 2019 ನೇ ಸಾಲಿನ ಅರ್ಜುನ ಪ್ರಶಸ್ತಿಗೆ ನಾಲ್ವರು ಟೀಂ ಇಂಡಿಯಾ ಕ್ರಿಕೆಟಿಗರ ಹೆಸರನ್ನು ಶಿಫಾರಸ್ಸು ಮಾಡಿದೆ.

 

ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಮತ್ತು ಪೂನಂ ಯಾದವ್ ಹೆಸರುಗಳನ್ನು ಬಿಸಿಸಿಐ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ.
 
ಬುಬ್ರಾ ಏಕದಿನ ರ್ಯಾಂಕಿಂಗ್ ನಲ್ಲಿ ನಂ.1 ಬೌಲರ್. ರವೀಂದ್ರ ಜಡೇಜಾ ತಂಡಕ್ಕೆ ಕಮ್ ಬ್ಯಾಕ್ ಮಾಡಿದಾಗ ಉತ್ತಮ ಸಾಧನೆ ತೋರಿದ್ದರು. ಮೊಹಮ್ಮದ್ ಶಮಿ ಇತ್ತೀಚೆಗಿನ ದಿನಗಲ್ಲಿ ಏಕದಿನ ಫಾರ್ಮ್ಯಾಟ್ ನಲ್ಲೂ ಮಿಂಚುತ್ತಿದ್ದಾರೆ. ಇನ್ನು ಮಹಿಳಾ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ಪೂನಂ ಯಾದವ್ ಗಮನಾರ್ಹ ಸಾಧನೆ ಗಮನಿಸಿ ಪ್ರಶಸ್ತಿಗೆ ಹೆಸರು ಸೂಚಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :