ಕ್ರೀಡಾ ಪ್ರಶಸ್ತಿ ಸಮಾರಂಭಕ್ಕೆ ಗೈರಾಗಲಿರುವ ರವೀಂದ್ರ ಜಡೇಜಾ, ಭಜರಂಗ್ ಪೂನಿಯಾ

ನವದೆಹಲಿ, ಗುರುವಾರ, 29 ಆಗಸ್ಟ್ 2019 (10:48 IST)

ನವದೆಹಲಿ: ಇಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಾರಂಭಕ್ಕೆ ಕ್ರಿಕೆಟಿಗ ರವೀಂದ್ರ ಜಡೇಜಾ ಮತ್ತು ಕುಸ್ತಿಪಟು ಭಜರಂಗ್ ಪೂನಿಯಾ ಗೈರಾಗಲಿದ್ದಾರೆ.


 
ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಗಾಗಿ ತೆರಳಿರುವುದರಿಂದ ಜಡೇಜಾ ಗೈರು ಹಾಜರಾಗಲಿದ್ದಾರೆ. ಇನ್ನು ಮುಂಬರುವ ವಿಶ್ವಚಾಂಪಿಯನ್ ಶಿಪ್ ಕುಸ್ತಿ ಪಂದ್ಯಾವಳಿಗಾಗಿ ರಷ್ಯಾದಲ್ಲಿ ತರಬೇತಿ ಪಡೆಯುತ್ತಿರುವ ಕಾರಣಕ್ಕೆ ಭಜರಂಗ್ ಪೂನಿಯಾ ಸಮಾರಂಭ ತಪ್ಪಿಸಿಕೊಳ್ಳಲಿದ್ದಾರೆ.
 
ಜಡೇಜಾ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರೆ, ಪೂನಿಯಾ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇಂದು ರಾಷ್ಟ್ರಪತಿಗಳಿಂದ ಪ್ರಶಸ್ತಿ ವಿಜೇತರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಇಂದು ಸಮಾರಂಭಕ್ಕೆ ಗೈರು ಹಾಜರಾದ ಕ್ರೀಡಾಳುಗಳು ತವರಿಗೆ ವಾಪಸಾದ ಬಳಿಕ ಕ್ರೀಡಾ ಸಚಿವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿಯ ಮತ್ತೊಂದು ದಾಖಲೆ ಮುರಿಯುವ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ

ಜಮೈಕಾ: ಮೊನ್ನೆಯಷ್ಟೇ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಗೆದ್ದು ಅತೀ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ...

news

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಭಾರತೀಯ ರಾಯಭಾರ ಇಲಾಖೆಯಿಂದ ಭರ್ಜರಿ ಭೋಜನ

ಜಮೈಕಾ: ವೆಸ್ಟ್ ಇಂಡೀಸ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರಿಗೆ ...

news

ವಿಂಡೀಸ್ ಬಳಿಕ ದ.ಆಫ್ರಿಕಾ ಸರಣಿಯಿಂದಲೂ ಧೋನಿ ಔಟ್?

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಸೀಮಿತ ಓವರ್ ಗಳ ಪಂದ್ಯಗಳಿಂದ ವಿಶ್ರಾಂತಿ ಪಡೆದಿದ್ದ ಧೋನಿ ಇದೀಗ ...

news

ತೆಂಡುಲ್ಕರ್ ಗಿಂತಲೂ ಬೆನ್ ಸ್ಟೋಕ್ ಶ್ರೇಷ್ಠ ಎಂದ ಐಸಿಸಿಗೆ ಟ್ವಿಟರಿಗರು ತಪರಾಕಿ

ದುಬೈ: ವಿಶ್ವಕಪ್ ಮತ್ತು ಆಶಸ್ ಟೆಸ್ಟ್ ಕ್ರಿಕೆಟ್ ನಲ್ಲಿ ಮಿಂಚಿದ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ...