Widgets Magazine

ಆಸ್ಟ್ರೇಲಿಯಾ ಕ್ರಿಕೆಟಿಗ ಫಿಂಚ್ ಗೆ ಜೆರ್ಸಿ ಉಡುಗೊರೆ ನೀಡಿದ್ದ ವಿರಾಟ್ ಕೊಹ್ಲಿ, ಧೋನಿ

ಮುಂಬೈ| Krishnaveni K| Last Modified ಸೋಮವಾರ, 29 ಏಪ್ರಿಲ್ 2019 (08:53 IST)
ಮುಂಬೈ: ತಮಗೆ ಟೀಂ ಇಂಡಿಯಾ ಜೆರ್ಸಿ ಉಡುಗೊರೆಯಾಗಿ ನೀಡಿದ್ದ ಧೋನಿ ಮತ್ತು ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯಾ ಕ್ರಿಕೆಟಿಗ ಏರಾನ್ ಫಿಂಚ್ ಧನ್ಯವಾದ ಸಲ್ಲಿಸಿದ್ದಾರೆ.

 
ಕಳೆದ ಬಾರಿ ಭಾರತ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದಾಗ ಧೋನಿ ಮತ್ತು ಕೊಹ್ಲಿ ತಮಗೆ ಈ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದರು ಎಂಬ ಸಂಗತಿಯನ್ನು ಫಿಂಚ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.
 
ಅಷ್ಟೇ ಅಲ್ಲದೆ, ಈ ಶ್ರೇಷ್ಠ ಕ್ರಿಕೆಟಿಗರ ವಿರುದ್ಧ ಆಡಿದ್ದು ನಮಗೆ ಗೌರವದ ಸಂಗತಿ. ಅವರು ತಮ್ಮ ಜೆರ್ಸಿ ನೀಡಿ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ ಎಂದು ಫಿಂಚ್ ಬರೆದುಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :