ಇಂಗ್ಲೆಂಡ್ ಕ್ರಿಕೆಟಿಗರಿಗೆ ಮಹಿಳೆಯರಿಂದ ಅವಮಾನ

ಅಹಮ್ಮದಾಬಾದ್| Krishnaveni K| Last Updated: ಶನಿವಾರ, 27 ಫೆಬ್ರವರಿ 2021 (10:06 IST)
ಅಹಮ್ಮದಾಬಾದ್: ಭಾರತದ ವಿರುದ್ಧ ಮೂರನೇ ಟೆಸ್ಟ್ ಪಂದ್ಯವನ್ನು ಕೇವಲ ಎರಡೇ ದಿನದಲ್ಲಿ ಸೋತು ಸುಣ್ಣವಾದ ಇಂಗ್ಲೆಂಡ್ ಕ್ರಿಕೆಟಿಗರನ್ನು ಅದೇ ದೇಶದ ಮಹಿಳಾ ಕ್ರಿಕೆಟಿಗರೊಬ್ಬರು ಅವಮಾನಿಸಿದ್ದಾರೆ. ಇದು ಪುರುಷರ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
 

ಮಹಿಳಾ ಕ್ರಿಕೆಟ್ ತಂಡದ ಸ್ಪಿನ್ನರ್ ಅಲೆಕ್ಸಾಂಡ್ರಾ ಹಾರ್ಟ್ಲೀ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಪುರುಷರ ಕ್ರಿಕೆಟ್ ತಂಡವನ್ನು ವ್ಯಂಗ್ಯ ಮಾಡಿದ್ದಾರೆ. ‘ಇಂಗ್ಲೆಂಡ್ ಮಹಿಳೆಯರು ಇಂದು ರಾತ್ರಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಆಡುವ ಕೆಲವೇ ಕ್ಷಣಗಳ ಮೊದಲು ಪುರುಷರ ತಂಡ ಪಂದ್ಯ ಮುಗಿಸಿ ಉಪಕಾರ ಮಾಡಿದೆ. ಈಗ ಮಹಿಳೆಯರ ಕ್ರಿಕೆಟ್ ನ್ನು ವೀಕ್ಷಿಸಿ’ ಎಂದು ಅಲೆಕ್ಸಾಂಡ್ರಾ ವ್ಯಂಗ್ಯ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ಕ್ರಿಕೆಟಿಗ ರೋರಿ ಬರ್ನ್ಸ್ ‘ಮಹಿಳೆಯರ ಕ್ರಿಕೆಟ್ ಗೆ ನಮ್ಮಿಂದ ಎಷ್ಟು ಪ್ರೋತ್ಸಾಹ ನೀಡಿಯೂ ನಮಗೆ ನಿಮ್ಮಿಂದ ಇಂಥಾ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನು ವೇಗಿ ಜೇಮ್ಸ್ ಆಂಡರ್ಸನ್, ಬೆನ್ ಸ್ಟೋಕ್ಸ್ ಮುಂತಾದವರು ಲೈಕ್ ಮಾಡುವ ಮೂಲಕ ಅನುಮೋದಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :