ಅಜಿಂಕ್ಯಾ ರೆಹಾನ್ ಫ್ಲಾಪ್ ಶೋ: ಟಾಟಾ ಬೈ ಬೈ ಎಂದ ಟ್ವಿಟರಿಗರು

ಕೇಪ್ ಟೌನ್| Krishnaveni K| Last Modified ಗುರುವಾರ, 13 ಜನವರಿ 2022 (16:36 IST)
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಎರಡೂ ಇನಿಂಗ್ಸ್ ಗಳಲ್ಲಿ ಮತ್ತೆ ಫ್ಲಾಪ್ ಶೋ ಮಾಡಿದ ಅಜಿಂಕ್ಯಾ ರೆಹಾನೆ ವಿರುದ್ಧ ಟ್ವಿಟರಿಗರು ಮತ್ತೆ ಕೆಂಡ ಕಾರಿದ್ದಾರೆ.

ಸತತ ವೈಫಲ್ಯದ ಹೊರತಾಗಿಯೂ ರೆಹಾನೆಗೆ ತಂಡದಲ್ಲಿ ಸ್ಥಾನ ಕೊಡಲಾಗುತ್ತಿದೆ. ಹಾಗಿದ್ದರೂ ಅದನ್ನು ಅವರು ಬಳಸಿಕೊಳ‍್ಳುತ್ತಿಲ್ಲ. ಈ ಪಂದ್ಯದಲ್ಲೂ ನಿರ್ಣಾಯಕ ಘಟ್ಟದಲ್ಲಿ ಅವರು ಕೈಕೊಟ್ಟಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.


ಹೀಗಾಗಿ ‘ಟ್ವಿಟರ್ ನಲ್ಲಿ ‘ಥ್ಯಾಂಕ್ಯೂ ರೆಹಾನೆ’ ನಿಮ್ಮ ಸೇವೆ ಸಾಕು ಎಂದು ಅಭಿಯಾನವನ್ನೇ ಆರಂಭಿಸಿದ್ದಾರೆ. ಈ ಸರಣಿಯಲ್ಲಿ ಅವರಿಗೆ ಮತ್ತೊಂದು ಅವಕಾಶ ಸಿಕ್ಕಿತ್ತು. ಅದನ್ನು ಬಳಸಿಕೊಳ್ಳಲು ವಿಫಲವಾಗಿರುವುದು ವಿಪರ್ಯಾಸ.


ಇದರಲ್ಲಿ ಇನ್ನಷ್ಟು ಓದಿ :