ಹರ್ಭಜನ್ ಸಿಂಗ್ ಗೆ ಕೈತಪ್ಪಿದ ಖೇಲ್ ರತ್ನ ಪ್ರಶಸ್ತಿ

ನವದೆಹಲಿ, ಗುರುವಾರ, 25 ಜುಲೈ 2019 (09:39 IST)

ನವದೆಹಲಿ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಗೆ ಸಿಗಬೇಕಿದ್ದ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿ ಕೈತಪ್ಪಿ ಹೋಗಿದೆ.


 
ಈ ಬಾರಿ ಅರ್ಜುನ ಪ್ರಶಸ್ತಿಗೆ ಕ್ರಿಕೆಟಿಗರಾದ ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಹೆಸರುಗಳನ್ನು ಬಿಸಿಸಿಐ ಶಿಫಾರಸ್ಸು ಮಾಡಿತ್ತು. ಪಂಜಾಬ್ ಸರ್ಕಾರ ಹರ್ಭಜನ್ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿತ್ತು.  
 
ಆದರೆ ಕೊನೆ ಗಳಿಗೆಯಲ್ಲಿ ಮೂರು ಹೆಸರುಗಳನ್ನು ಮಾತ್ರ ಕೊಡಲು ಕ್ರೀಡಾ ಸಚಿವಾಲಯ ಸೂಚಿಸಿತ್ತು. ಹೀಗಾಗಿ ಹರ್ಭಜನ್ ಬಿಟ್ಟು ಉಳಿದೆಲ್ಲಾ ಹೆಸರುಗಳು ಪ್ರಶಸ್ತಿಗೆ ಶಿಫಾರಸ್ಸುಗೊಂಡಿವೆ. ಇದೇ ರೀತಿ ಓಟಗಾರ್ತಿ ದ್ಯುತಿ ಚಾಂದ್ ಹೆಸರೂ ಕೂಡಾ ಅರ್ಜುನ ಪ್ರಶಸ್ತಿ ಶಿಫಾರಸ್ಸಿನಿಂದ ಹೊರಬಿದ್ದಿದೆ. ದ್ಯುತಿ ಹೆಸರು ನಿಗದಿತ ದಿನಾಂಕ ಕಳೆದ ಮೇಲೆ ಸಲ್ಲಿಕೆಯಾಗಿದೆ ಎಂಬ ಕಾರಣಕ್ಕೆ ದ್ಯುತಿ ಹೆಸರನ್ನು ಕೈಬಿಡಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ ಸೋಲಿನ ಬಳಿಕ ಹೇಗಿದ್ದರು ವಿರಾಟ್ ಕೊಹ್ಲಿ?

ಮುಂಬೈ: ಟೀಂ ಇಂಡಿಯಾ ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತಿದ್ದು ಅಭಿಮಾನಿಗಳಿಗೆ ತೀರಾ ಆಘಾತ ಮೂಡಿಸಿತ್ತು. ...

news

ವಿರಾಟ್ ಕೊಹ್ಲಿ ಮನವಿ ಮೇರೆಗೆ ನಿವೃತ್ತಿಯನ್ನು ಮುಂದೂಡಿದ್ದಾರಾ ಧೋನಿ?!

ಮುಂಬೈ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಧೋನಿ ವಿಶ್ವಕಪ್ ಬಳಿಕ ನಿವೃತ್ತಿ ಹೇಳಬಹುದು ಎಂಬ ಊಹಾಪೋಹಗಳಿತ್ತು. ...

news

ರಿಷಬ್ ಪಂತ್ ಗಾಗಿ ಧೋನಿ ನಿವೃತ್ತಿಯಾಗೋ ಹಾಗಿಲ್ಲ!

ಮುಂಬೈ: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಧೋನಿ ನಿವೃತ್ತಿ ಬಗ್ಗೆ ಹಲವು ಅಭಿಪ್ರಾಯಗಳು ಕೇಳಿಬರುತ್ತಿವೆ. ...

news

ಟೀಂ ಇಂಡಿಯಾ ಕೋಚ್ ಆಗಲು ಆಸಕ್ತಿ ವಹಿಸಿದ ಶ್ರೀಲಂಕಾದ ಖ್ಯಾತ ಕ್ರಿಕೆಟಿಗ

ಮುಂಬೈ: ಟೀಂ ಇಂಡಿಯಾ ಕೋಚ್ ಹುದ್ದೆಗೆ ಬಿಸಿಸಿಐ ಈಗಾಗಲೇ ಅರ್ಜಿ ಆಹ್ವಾನಿಸಿದ್ದು, ಹಲವರು ಕೋಚ್ ಆಗಲು ...