ಭಾರತ-ಆಸ್ಟ್ರೇಲಿಯಾ ಟೆಸ್ಟ್: ಪೂಜಾರ ಮಾತು ಕೇಳಿ ವಿಕೆಟ್ ಕಳೆದುಕೊಂಡರೇ ರಿಷಬ್ ಪಂತ್?!

ಅಡಿಲೇಡ್, ಗುರುವಾರ, 6 ಡಿಸೆಂಬರ್ 2018 (10:31 IST)

ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಚಹಾ ವಿರಾಮದ ವೇಳೆಗೆ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ ಸಂಕಷ್ಟದಲ್ಲಿದೆ.


 
ಟೀಂ ಇಂಡಿಯಾ ಪರ (46) ಬಿಟ್ಟರೆ ಬೇರೆ ಯಾವುದೇ ಬ್ಯಾಟ್ಸ್ ಮನ್ ಗಳೂ ಟೆಸ್ಟ್ ಶೈಲಿಯಲ್ಲಿ ನಿಂತು ಆಡುವ ಪ್ರಯತ್ನ ಮಾಡದೇ ಇರುವುದೇ ಈ ಶೋಚನೀಯ ಸ್ಥಿತಿಗೆ ಕಾರಣವಾಯಿತು.
 
ರಿಷಬ್ ಪಂತ್ ತಮ್ಮ ಎಂದಿನ ಹೊಡೆ ಬಡಿಯ ಶೈಲಿಯಲ್ಲಿ ಸಿಕ್ಸರ್, ಬೌಂಡರಿ ಚಚ್ಚುತ್ತ ರನ್ ಗಳಿಸುತ್ತಿದ್ದರು. ಆದರೆ ಈ ನಡುವೆ ವಿಕೆಟ್ ಗಳು ಉರುಳುತ್ತಿದ್ದರಿಂದ ಜತೆಯಾಟವಾಡಲು ಕೊಂಚ ನಿಧಾನವಾಗಿ ಆಡಲು ಚೇತೇಶ್ವರ ಪೂಜಾರ ಸಲಹೆ ನೀಡಿದ್ದಿರಬೇಕು. ಇದೇ ಕಾರಣಕ್ಕೆ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ರಿಷಬ್ ವಿಕೆಟ್ ಕೀಪರ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದ್ದವರಲ್ಲಿ ಪೂಜಾರ ಒಬ್ಬರೇ ನಥಾನ್ ಲಿಯನ್ ಮತ್ತು ಆಸೀಸ್ ನ ಇತರ ವೇಗಿಗಳ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಾ, ಪಕ್ಕಾ ಟೆಸ್ಟ್ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದರೆ ಅವರಿಗೆ ಸೂಕ್ತ ಸಾಥ್ ಸಿಗುತ್ತಿಲ್ಲ ಎನ್ನುವುದೇ ವಿಪರ್ಯಾಸ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಗಾಯಗೊಂಡಿರುವ ಪೃಥ್ವಿ ಶಾ ಸ್ಥಿತಿ ಏನಾಗಿದೆ ಗೊತ್ತಾ? ರವಿಶಾಸ್ತ್ರಿ ಹೇಳಿದ್ದೇನು?

ಅಡಿಲೇಡ್: ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಪ್ರತಿನಿಧಿಸುವ ಅವಕಾಶ ಪಡೆದ ...

news

ಭಾರತ-ಆಸ್ಟ್ರೇಲಿಯಾ ಟೆಸ್ಟ್: ಗಡಿಬಿಡಿಯಲ್ಲಿ ವಿಕೆಟ್ ಕೈ ಚೆಲ್ಲಿದ ಟೀಂ ಇಂಡಿಯಾ

ಅಡಿಲೇಡ್: ಒಂದೆಡೆ ಆಸ್ಟ್ರೇಲಿಯನ್ ಬೌಲರ್ ಗಳ ಸಂಘಟಿತ ಹೋರಾಟ. ಇನ್ನೊಂದೆಡೆ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳ ...

news

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಆಟಗಾರರ ಹೆಸರು ಘೋಷಿಸಿದ ಟೀಂ ಇಂಡಿಯಾ

ಅಡಿಲೇಡ್: ನಾಳೆಯಿಂದ ಇಲ್ಲಿನ ಓವಲ್ ಮೈದಾನದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ 12 ...

news

ಆಸ್ಟ್ರೇಲಿಯಾದಲ್ಲಿ ಹೊಸ ದಾಖಲೆ ಬರೆಯಲು ವಿರಾಟ್ ಕೊಹ್ಲಿಗೆ ಎರಡೇ ಹೆಜ್ಜೆ

ಅಡಿಲೇಡ್: ನಾಳೆಯಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಹೊಸ ...