ಭಾರತ-ಬಾಂಗ್ಲಾ ಹೊನಲು ಬೆಳಕು ಟೆಸ್ಟ್ ಗೆ ಭಾರತೀಯ ಸೇನೆಯ ನೇತೃತ್ವ!

ಮುಂಬೈ, ಭಾನುವಾರ, 17 ನವೆಂಬರ್ 2019 (08:55 IST)

ಮುಂಬೈ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನವಂಬರ್ 22 ರಿಂದ ಕೋಲ್ಕೊತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಆಡಲಿರುವ ಹೊನಲು ಬೆಳಕಿನ ಟೆಸ್ಟ್ ಪಂದ್ಯಕ್ಕೆ ಭಾರತೀಯ ಸೇನೆ ನೇತೃತ್ವ ವಹಿಸಲಿದೆ.


 
ಈ ಪಂದ್ಯ ಭಾರತ ಮತ್ತು ಬಾಂಗ್ಲಾ ಆಡಲಿರುವ ಮೊದಲ ಹೊನಲು ಬೆಳಕಿನ ಟೆಸ್ಟ್ ಪಂದ್ಯವಾಗಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದಾರೆ. ಹೀಗಾಗಿ ಪಂದ್ಯಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.
 
ಈ ಪಂದ್ಯಕ್ಕೆ ಮೊದಲು ರಾಷ್ಟ್ರಗೀತೆ ನುಡಿಸಲಾಗುತ್ತದೆ. ವಿಶೇಷವೆಂದರೆ ಭಾರತ ಮತ್ತು ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನು ಸ್ವತಃ ಭಾರತೀಯ ಸೇನೆ ನುಡಿಸಲಿದೆ. ಅದೂ ವಿಶೇಷ ರೀತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪಕ್ಕಾ ಸೇನಾ ಶೈಲಿಯಲ್ಲಿ ಪ್ಯಾರಾಟ್ರೂಪ್ ಸದಸ್ಯರು ರಾಷ್ಟ್ರಗೀತೆ ಬಳಿಕ ಉಭಯ ನಾಯಕರಿಗೆ ಪಿಂಕ್ ಬಾಲ್ ಹಸ್ತಾಂತರಿಸಲಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾಕ್ಕೆ ಇನಿಂಗ್ಸ್ ಗೆಲುವು

ಇಂಧೋರ್: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನಿಂಗ್ಸ್ ಮತ್ತು 130 ...

news

ಭಾರತ-ಬಾಂಗ್ಲಾ ಟೆಸ್ಟ್: ಇನಿಂಗ್ಸ್ ಸೋಲು ತಪ್ಪಿಸಲು ಬಾಂಗ್ಲಾ ಹರಸಾಹಸ

ಇಂಧೋರ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಸೋಲು ...

news

ಪ್ರಶ್ನೆ ಕೇಳಿದ ಪತ್ರಕರ್ತನಿಗೇ ಶಾಕ್ ಕೊಟ್ಟ ಮಯಾಂಕ್ ಅಗರ್ವಾಲ್!

ಇಂಧೋರ್: ಡಬಲ್ ಸೆಂಚುರಿ ಬಾರಿಸಿದ ಖುಷಿಯಲ್ಲಿರುವ ಟೀಂ ಇಂಡಿಯಾ ಆರಂಭಿಕ ಮಯಾಂಕ್ ಅಗರ್ವಾಲ್ ಕೊನೆಗೆ ...

news

ಐಪಿಎಲ್ ಹರಾಜು: ಯುವರಾಜ್, ರಾಬಿನ್ ಉತ್ತಪ್ಪರನ್ನು ಕೈ ಬಿಟ್ಟ ಫ್ರಾಂಚೈಸಿಗಳು

ಮುಂಬೈ: ಈ ವರ್ಷದ ಐಪಿಎಲ್ ಹರಾಜು ಪ್ರಕ್ರಿಯೆಗೆ ಮೊದಲು ಆಯಾ ಫ್ರಾಂಚೈಸಿಗಳು ಕೆಲವು ಆಟಗಾರರನ್ನು ತಂಡದಿಂದ ...