ಬೆಂಗಳೂರು: ವಿಶಾಖಪಟ್ಟಣದಲ್ಲಿ ದ.ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕರಾಗಿ ಕಣಕ್ಕಿಳಿದಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಇದೀಗ ಶತಕದ ಹೊಸ್ತಿಲಲ್ಲಿದ್ದಾರೆ.84 ರನ್ ಗಳಿಸಿರುವ ಮಯಾಂಕ್ ಶತಕ ಗಳಿಸಲಿ ಎಂಬುದು ಅಭಿಮಾನಿಗಳ ಹಾರೈಕೆ. ಈ ನಡುವೆ ಕ್ರಿಕೆಟ್ ನ್ನು ಸದಾ ಪ್ರೀತಿಸುವ, ಬೆಂಬಲಿಸುವ ನಟ ಕಿಚ್ಚ ಸುದೀಪ್ ಮಯಾಂಕ್ ಗೆ ಬೆಸ್ಟ್ ಆಫ್ ಲಕ್ ಹೇಳಿದ್ದಾರೆ.ನಿನ್ನ ಆಟದ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ನಿನ್ನ ಆಟ ನನ್ನ