ಟೀಂ ಇಂಡಿಯಾ ಸೋಲಿಸಿದ್ದು ನೀವೇ! ಟ್ರೋಲ್ ಆದ ಕೃನಾಲ್ ಪಾಂಡ್ಯ

ಕೊಲೊಂಬೋ| Krishnaveni K| Last Modified ಶನಿವಾರ, 31 ಜುಲೈ 2021 (09:51 IST)
ಕೊಲೊಂಬೋ: ಶ್ರೀಲಂಕಾ ಪ್ರವಾಸದಲ್ಲಿ ಕೊರೋನಾ ಸೋಂಕಿತರಾಗಿ ಟೀಂ ಇಂಡಿಯಾ ಸಂಕಷ್ಟಕ್ಕೆ ಕಾರಣವಾದ ಆಲ್ ರೌಂಡರ್ ಕೃನಾಲ್ ಪಾಂಡ್ಯರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

 

ಸಮೀಪವರ್ತಿಗಳಾಗಿದ್ದ ಕಾರಣಕ್ಕೆ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ, ಇಶಾನ್ ಕಿಶನ್ ನಂತಹ ಪ್ರಮುಖ ಆಟಗಾರರಿಗೆ ಟಿ20 ಸರಣಿಯಲ್ಲಿ ಆಡಲು ಸಾಧ‍್ಯವಾಗಲಿಲ್ಲ. ಇದರಿಂದ ಸರಣಿ ಸೋಲಬೇಕಾಯಿತು.
 
ಕೃನಾಲ್ ತಮ್ಮ ಸಹೋದರ ಹಾರ್ದಿಕ್ ಪಾಂಡ್ಯ ಪುತ್ರ ಅಗಸ್ತ್ಯನ ಬರ್ತ್ ಡೇಗೆ ವಿಡಿಯೋವೊಂದನ್ನು ಪ್ರಕಟಿಸಿದ್ದರು. ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಟೀಂ ಇಂಡಿಯಾಗಂತೂ ನಿಮ್ಮಿಂದ ದೊಡ್ಡ ಉಪಕಾರವೇನೂ ಆಗಲಿಲ್ಲ. ಆದರೆ ಲಂಕಾ ಕಡೆಯಿಂದ ಮ್ಯಾನ್ ಆಫ್ ದಿ ಮ್ಯಾಚ್ ಆದಿರಿ ಎಂದು ವ್ಯಂಗ್ಯ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :