ಟೀಂ ಇಂಡಿಯಾಕ್ಕೆ ಬ್ರೇಕ್ ಕೊಟ್ಟ ಕುಲದೀಪ್ ಯಾದವ್

ಕೊಲೊಂಬೋ| Krishnaveni K| Last Modified ಭಾನುವಾರ, 18 ಜುಲೈ 2021 (17:11 IST)
ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಅತಿಥೇಯರಿಗೆ ಕುಲದೀಪ್ ಯಾದವ್ ಆಘಾತ ನೀಡಿದ್ದಾರೆ.
 
Photo Courtesy: Google

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಲಂಕಾ ಉತ್ತಮ ಆರಂಭವನ್ನೇ ಪಡೆಯಿತು. ಆದರೆ ಭಾರತ ಸ್ಪಿನ್ ದಾಳಿಗಿಳಿಸುತ್ತಿದ್ದಂತೇ ಲಂಕಾ ಬಾಲ ಮುದುರಿಕೊಂಡಿತು.
 
ಇತ್ತೀಚೆಗಿನ ವಿವರ ಬಂದಾಗ ಲಂಕಾ 4 ವಿಕೆಟ್ ಕಳೆದುಕೊಂಡು 28.4 ಓವರ್ ಗಳಲ್ಲಿ 128 ರನ್ ಗಳಿಸಿದೆ. ಇದೀಗ 4 ರನ್ ಗಳಿಸಿರುವ ಶಣಕ, 18 ರನ್ ಗಳಿಸಿರುವ ಚರಿತ ಅಸಲಂಕ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತದ ಪರ ಕುಲದೀಪ್ ಯಾದವ್ 2, ಯಜುವೇಂದ್ರ ಚಾಹಲ್, ಕೃನಾಲ್ ಪಾಂಡ್ಯ ತಲಾ 1 ವಿಕೆಟ್ ಕಬಳಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :