ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಶಿಖರ್ ಧವನ್ ಗೆ ಇನ್ನು ಕಷ್ಟ!

ಮುಂಬೈ| Krishnaveni K| Last Modified ಸೋಮವಾರ, 2 ಆಗಸ್ಟ್ 2021 (12:43 IST)
ಮುಂಬೈ: ಶ್ರೀಲಂಕಾ ವಿರುದ್ಧ ಟಿ20 ಸರಣಿ ಟೀಂ ಇಂಡಿಯಾ ಹಂಗಾಮಿ ನಾಯಕ ಶಿಖರ್ ಧವನ್ ಪಾಲಿಗೆ ವೈಯಕ್ತಿಕವಾಗಿಯೂ ಮಹತ್ವದ್ದಾಗಿತ್ತು.
 

ಒಂದು ವೇಳೆ ಧವನ್ ವೈಯಕ್ತಿಕವಾಗಿ ಈ ಸರಣಿಯಲ್ಲಿ ರನ್ ಗಳಿಸಿ ಸಾಮರ್ಥ್ಯ ಪ್ರದರ್ಶಿಸಿದ್ದರೆ ಮುಂಬರುವ ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಬಹುದಿತ್ತು. ಆದರೆ ಧವನ್ ರಿಂದ ಹೇಳಿಕೊಳ್ಳುವಂತಹ ಇನಿಂಗ್ಸ್ ಬಂದಿಲ್ಲ.
 
ಹೀಗಾಗಿ ವಿಶ್ವಕಪ್ ತಂಡದಲ್ಲಿ ಧವನ್ ಸ್ಥಾನ ಪಡೆಯುವುದು ಅನುಮಾನವಾಗಿದೆ. ಈಗಾಗಲೇ ಟಿ20 ವಿಶ್ವಕಪ್ ತಂಡಕ್ಕೆ ಆರಂಭಿಕರಾಗಿ ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಡುವೆ ಪೈಪೋಟಿಯಿದೆ. ಇದರ ನಡುವೆ ಪೃಥ್ವಿ ಶಾ ಅವಕಾಶ ಪಡೆಯಬಹುದಷ್ಟೇ ಹೊರತು ಧವನ್ ಗೆ ಸ್ಥಾನ ನೀಡುವುದು ಅನುಮಾನವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :