ಸಿಡ್ನಿಯಲ್ಲಿ ಆಪರೇಷನ್ ಮುಗಿಸಿ ಬೆಂಗಳೂರಿಗೆ ಬರಲಿರುವ ರವೀಂದ್ರ ಜಡೇಜಾ

ಸಿಡ್ನಿ| Krishnaveni K| Last Modified ಮಂಗಳವಾರ, 12 ಜನವರಿ 2021 (09:58 IST)
ಸಿಡ್ನಿ: ಕೈ ಬೆರಳಿನ ಮುರಿತಕ್ಕೊಳಗಾಗಿರುವ ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಸಿಡ್ನಿಯಲ್ಲಿ ಶಸ್ತ್ರಚಿಕಿತ್ಸೆ ಮುಗಿಸಿ ಬೆಂಗಳೂರಿಗೆ ಆಗಮಿಸಲಿದ್ದಾರೆ.  
> ಶಸ್ತ್ರಚಿಕಿತ್ಸೆ ಬಳಿಕ ಜಡೇಜಾ ನೇರವಾಗಿ ಬೆಂಗಳೂರಿಗೆ ಬಂದು ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ ಎರಡು ಪಂದ್ಯಗಳಿಂದಲೂ ಜಡೇಜಾ ಗೈರಾಗಲಿದ್ದಾರೆ. ಈ ಆಸ್ಟ್ರೇಲಿಯಾ ಪ್ರವಾಸ ಮುಗಿದೊಡನೆ ಟೀಂ ಇಂಡಿಯಾ ಪ್ರಮುಖರೆಲ್ಲಾ ಗಾಯಗೊಂಡು ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಂತೂ ಖಂಡಿತಾ.>


ಇದರಲ್ಲಿ ಇನ್ನಷ್ಟು ಓದಿ :