ಐಪಿಎಲ್ ವಿರುದ್ಧ ಸಿಟ್ಟು ಹೊರ ಹಾಕಿದ ದ.ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಫಾ ಡು ಪ್ಲೆಸಿಸ್

ಲಂಡನ್| Krishnaveni K| Last Modified ಗುರುವಾರ, 6 ಜೂನ್ 2019 (09:40 IST)
ಲಂಡನ್: ರಲ್ಲಿ ಯಾಕೋ ದ.ಆಫ್ರಿಕಾಗೆ ಗಾಯಾಳುಗಳದ್ದೇ ಚಿಂತೆಯಾಗಿದೆ. ತಂಡದ ಪ್ರಮುಖ ಆಟಗಾರರೆಲ್ಲಾ ಗಾಯಾಳುಗಳಾಗಿ ತವರಿಗೆ ಮರಳಿರುವುದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ.
 

ಇದರ ಬೆನ್ನಲ್ಲೇ ಪ್ರಮುಖ ವೇಗಿ ಡೇಲ್ ಸ್ಟೇನ್ ಗಾಯದಿಂದಾಗಿ ವಿಶ್ವಕಪ್ ನಿಂದಲೇ ಹೊರಬಿದ್ದಿದ್ದಾರೆ. ಇದೆಲ್ಲದರ ನಡುವೆ ನಾಯಕ ಫಾ ಡು ಪ್ಲೆಸಿಸ್ ಇದಕ್ಕೆಲ್ಲಾ ಐಪಿಎಲ್ ಕೂಟವೇ ಕಾರಣ ಎಂದು ಆಕ್ರೋಶ ಹೊರ ಹಾಕಿದ್ದಾರೆ.
 
ಐಪಿಎಲ್ ನ ಮಧ್ಯಭಾಗದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಿಕೊಂಡ ಡೇಲ್ ಸ್ಟೇನ್ ಬಳಿಕ ಗಾಯದ ಕಾರಣದಿಂದ ಎರಡೇ ಪಂದ್ಯವಾಡಿ ಹೊರನಡೆದಿದ್ದರು. ಇದೀಗ ಭಾರತದ ವಿರುದ್ಧದ ಪಂದ್ಯಕ್ಕಾಗುವಾಗ ಮತ್ತೆ ಭುಜದ ಗಾಯದ ಕಾರಣದಿಂದ ಸ್ಟೇನ್ ವಿಶ್ವಕಪ್ ನಿಂದಲೇ ಹೊರಬಿದ್ದಿದ್ದಾರೆ.
 
ಈ ಬಗ್ಗೆ ಪ್ರತಿಕ್ರಿಯಿಸಿದ ಫಾ ಡು ಪ್ಲೆಸಿಸ್ ‘ಒಂದು ವೇಳೆ ಸ್ಟೇನ್ ಐಪಿಎಲ್ ನಲ್ಲಿ ಆ ಎರಡು ಪಂದ್ಯವಾಡದೇ ತಮ್ಮ ಫಿಟ್ ನೆಸ್ ಬಗ್ಗೆ ಗಮನ ಹರಿಸಿದ್ದರೆ ಇಂದು ಗಾಯವಾಗಿ ವಿಶ್ವಕಪ್ ನಿಂದ ಹೊರಹೋಗಬೇಕಾಗುತ್ತಿರಲಿಲ್ಲವೇನೋ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :