18 ವರ್ಷಗಳಲ್ಲಿ ದ.ಆಫ್ರಿಕಾಗೆ ಇಂಥಾ ಹೀನಾಯ ಸ್ಥಿತಿ ಬಂದಿದ್ದು ಇದೇ ಮೊದಲು!

ರಾಂಚಿ, ಸೋಮವಾರ, 21 ಅಕ್ಟೋಬರ್ 2019 (17:24 IST)

ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ನ ಮೂರನೇ ದಿನದಾಟದಲ್ಲಿ ದ.ಆಫ್ರಿಕಾ ಬ್ಯಾಟ್ಸ್ ಮನ್ ಗಳು ಒಂದೇ ದಿನ 16 ವಿಕೆಟ್ ಕಳೆದುಕೊಂಡು 18 ವರ್ಷಗಳ ಬಳಿಕ ಹೀನಾಯ ಸಾಧನೆಯೊಂದನ್ನು ಮಾಡಿದ್ದಾರೆ.


 
2001-02 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ದ.ಆಫ್ರಿಕಾ ಒಂದೇ ದಿನ 16 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಗೆ ತಲುಪಿತ್ತು. ಅದಾದ ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ಆಫ್ರಿಕಾಗೆ ಇಂಥಾ ದಯನೀಯ ಸ್ಥಿತಿ ಬಂದಿರಲಿಲ್ಲ.
 
ಆದರೆ ಇಂದು ಟೀಂ ಇಂಡಿಯಾ ವೇಗಿಗಳು ಮತ್ತು ಸ್ಪಿನ್ನರ್ ಗಳ ದಾಳಿಗೆ ಸಂಪೂರ್ಣ ತಡಬಡಾಯಿಸಿದ ಆಫ್ರಿಕಾ ಬ್ಯಾಟ್ಸ್ ಮನ್ ಗಳು ಒಂದೇ ದಿನ 16 ವಿಕೆಟ್ ಕಳೆದುಕೊಂಡು ಮತ್ತೆ ಆ ಸ್ಥಿತಿಯನ್ನೇ ಮೈಮೇಲೆಳದುಕೊಂಡರು. ಆಫ್ರಿಕಾದ ಈ ದಯನೀಯ ಸ್ಥಿತಿಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರಾಂಚಿ ಟೆಸ್ಟ್: ಟೀಂ ಇಂಡಿಯಾ ಗೆಲುವಿಗೆ ಇನ್ನು ಎರಡೇ ಮೆಟ್ಟಿಲು

ರಾಂಚಿ: ಮಳೆಯಾದರೇನು? ಮಂದಬೆಳಕಾದರೇನು? ಟೀಂ ಇಂಡಿಯಾದ ಬೌಲರ್ ಗಳ ಕರಾಮತ್ತಿಗೆ ಕೊನೆಯೇ ಇಲ್ಲದಂತಾಗಿದೆ. ...

news

ರಾಂಚಿ ಟೆಸ್ಟ್: ಟೀಂ ಇಂಡಿಯಾಗೆ ಆಘಾತ, ಇದ್ದಕ್ಕಿದ್ದಂತೆ ಫೀಲ್ಡ್ ಗೆ ಬಂದ ರಿಷಬ್ ಪಂತ್

ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ...

news

ರಾಂಚಿ ಟೆಸ್ಟ್: ಚೊಚ್ಚಲ ಟೆಸ್ಟ್ ವಿಕೆಟ್ ಪಡೆದು ದಾಖಲೆ ಮಾಡಿದ ನದೀಂ

ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೂರನೇ ...

news

ಅಪರೂಪಕ್ಕೆ ಬ್ಯಾಟ್ ಬೀಸಿದ್ರೂ ವಿಶ್ವದಾಖಲೆಯನ್ನೇ ಮಾಡಿದ ಉಮೇಶ್ ಯಾದವ್

ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ...