Widgets Magazine

ಕೊರೋನಾ ಭೀತಿಗೆ ಹೆದರದ ದ.ಆಫ್ರಿಕಾ ಕ್ರಿಕೆಟ್ ತಂಡ ಭಾರತ ಪ್ರವಾಸಕ್ಕೆ ಸಿದ್ಧ

ಮುಂಬೈ| Krishnaveni K| Last Modified ಶನಿವಾರ, 7 ಮಾರ್ಚ್ 2020 (09:40 IST)
ಮುಂಬೈ: ದೇಶದಲ್ಲಿ ಕೊರೋನಾವೈರಸ್ ಭೀತಿಯ ಹಿನ್ನಲೆಯಲ್ಲೂ ದ.ಆಫ್ರಿಕಾ ಕ್ರಿಕೆಟ್ ತಂಡ ಮೂರು ಪಂದ್ಯಗಳ ಏಕದಿನ ಸರಣಿ ಆಡಲು ಭಾರತಕ್ಕೆ ಬಂದಿಳಿಯಲಿದೆ.

 
ಕೊರೋನಾವೈರಸ್ ರೋಗದ ಅಪಾಯ ಭಾರತಕ್ಕೂ ಹರಡಿದೆ. ಆದರೆ ಪರಿಸ್ಥಿತಿ ಹದ್ದು ಮೀರಿಲ್ಲ ಎಂದು ಕಂಡುಬಂದ ಹಿನ್ನಲೆಯಲ್ಲಿ ದ.ಆಫ್ರಿಕಾ ನಿರಾತಂಕವಾಗಿ ಭಾರತ ಪ್ರವಾಸ ಮಾಡಲಿದೆ.
 
ಮಾರ್ಚ್ 12 ರಿಂದ ಭಾರತ ಮತ್ತು ದ.ಆಫ್ರಿಕಾ ನಡುವೆ ಏಕದಿನ ಸರಣಿ ಆರಂಭವಾಗಲಿದೆ. ಇದು ನಿರಾತಂಕವಾಗಿ ಸಾಗಲಿದೆ. ಹಾಗಿದ್ದರೂ ಆಟಗಾರರು ಶೇಕ್ ಹ್ಯಾಂಡ್ ಮಾಡದೇ ಇರುವುದು ಸೇರಿದಂತೆ ಹಲವು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಬಿಸಿಸಿಐ ಸಿದ್ಧತೆ ನಡೆಸಿದೆ.
ಇದರಲ್ಲಿ ಇನ್ನಷ್ಟು ಓದಿ :