Widgets Magazine

ಬಿಸಿಸಿಐ ಅಧ್ಯಕಕ್ಷರಾಗಿ ಅಧಿಕಾರ ಸ್ವೀಕರಿಸಿದ ಸೌರವ್ ಗಂಗೂಲಿ

ಮುಂಬೈ| Krishnaveni K| Last Modified ಬುಧವಾರ, 23 ಅಕ್ಟೋಬರ್ 2019 (16:14 IST)
ಮುಂಬೈ: 39 ನೇ ಅಧ‍್ಯಕ್ಷರಾಗಿ ಮಾಜಿ ನಾಯಕ ಸೌರವ್ ಗಂಗೂಲಿ ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ತಕ್ಷಣವೇ ಪತ್ರಿಕಾಗೋಷ್ಠಿ ನಡೆಸಿದ ಗಂಗೂಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

 
ಅದರಲ್ಲೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ತನ್ನ ಸಂಪೂರ್ಣ ಬೆಂಬಲವಿದೆ ಎಂದು ಕೊಹ್ಲಿ ಗುಣಗಾನ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ಗೆ ಮಹತ್ವಪೂರ್ಣ ಆಟಗಾರ ಕೊಹ್ಲಿ ಎಂದು ಗಂಗೂಲಿ ಹೇಳಿದ್ದಾರೆ.
 
ಇನ್ನು ಭಾರತೀಯ ಕ್ರಿಕೆಟ್ ನ್ನು ಭ್ರಷ್ಟಾಚಾರ ಮುಕ್ತ, ಉತ್ತರದಾಯಿತ್ವ ಸಂಸ್ಥೆಯಾಗಿ ಮಾಡುವುದು ನನ್ನ ಗುರಿಯಾಗಿದೆ. ಟೀಂ ಇಂಡಿಯಾವನ್ನು ಮುನ್ನಡೆಸುವಾಗಲೂ ನನ್ನ ಮಂತ್ರ ಇದೇ ಆಗಿತ್ತು. ದೇಶೀಯ ಕ್ರಿಕೆಟ್ ನ ಉದ್ದಾರ ಮಾಡುವುದು, ಐಸಿಸಿಯಿಂದ ಬರಬೇಕಾದ ಹಣ ಮರಳಿ ಪಡೆಯುವುದು ಇತ್ಯಾದಿ ನನ್ನ ಆದ್ಯತೆಯಾಗಿರುತ್ತದೆ ಎಂದು ಗಂಗೂಲಿ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :