ಕಪಿಲ್ ನೇತೃತ್ವದ ಸಮಿತಿಯಿಂದಾಗಿ ರವಿಶಾಸ್ತ್ರಿ ಕೋಚ್ ಹುದ್ದೆಗೇ ಕುತ್ತು!

ಮುಂಬೈ, ಸೋಮವಾರ, 30 ಸೆಪ್ಟಂಬರ್ 2019 (09:11 IST)

ಮುಂಬೈ: ಲೋಧಾ ಕಮಿಟಿ ಶಿಫಾರಸ್ಸಿನ ಅನ್ವಯ ಬಿಸಿಸಿಐನ ಯಾವುದೇ ಹುದ್ದೆಯಲ್ಲಿರುವವರು ಬೇರೆ ಯಾವುದೇ ಲಾಭದಾಯಕ ಹುದ್ದೆ ಹೊಂದುವಂತಿಲ್ಲ. ಇದು ಸ್ವ ಹಿತಾಸಕ್ತಿ ಹುದ್ದೆ ಸಂಘರ್ಷಕ್ಕೆಡೆ ಮಾಡುತ್ತದೆ.


 
ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್ ಸೇರಿದಂತೆ ಕ್ರಿಕೆಟ್ ನ ಘಟಾನುಘಟಿ ದಿಗ್ಗಜರೆಲ್ಲಾ ಈ ವಿಚಾರದಲ್ಲಿ ತನಿಖಾಧಿಕಾರಿಗಳಿಂದ ನೋಟಿಸ್ ಪಡೆದವರೇ. ಆದರೆ ಈಗ ಟೀಂ ಇಂಡಿಯಾ ಕೋಚ್ ಆಯ್ಕೆ ಮಾಡಿದ ಕಪಿಲ್ ದೇವ್ ನೇತೃತ್ವದ ಸಿಎಸಿ ಸಮಿತಿಯ ವಿರುದ್ಧವೇ ಸ್ವ ಹಿತಾಸಕ್ತಿ ಸಂಘರ್ಷದ ಆರೋಪ ಕೇಳಿಬಂದಿದೆ.
 
ಈ ಬಗ್ಗೆ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸದಸ್ಯ ಸಂಜೀವ್ ಗುಪ್ತಾ ಕಪಿಲ್ ನೇತೃತ್ವದ ಮೂವರು ಸಮಿತಿ ಸದಸ್ಯರ ಮೇಲೆ ಬಿಸಿಸಿಐ ತನಿಖಾಧಿಕಾರಿ ಡಿಕೆ ಜೈನ್ ಗೆ ದೂರು ನೀಡಿದ್ದಾರೆ. ಹೀಗಾಗಿ ಈಗ ಡಿಕೆ ಜೈನ್ ಈ ಸಮಿತಿ ಸದಸ್ಯರ ವಿರುದ್ಧ ತನಿಖೆ ನಡೆಸಲಿದ್ದು, ಒಂದು ವೇಳೆ ಆರೋಪ ಸಾಬೀತಾದರೆ, ಇವರು ಕೋಚ್ ಆಗಿ ಆಯ್ಕೆ ಮಾಡಿದ ರವಿಶಾಸ್ತ್ರಿ ಸ್ಥಾನಕ್ಕೆ ಕುತ್ತು ಬರಲಿದೆ. ರವಿಶಾಸ್ತ್ರಿ ಮತ್ತೊಮ್ಮೆ ಟೀಂ ಇಂಡಿಯಾ ಕೋಚ್ ಆಗಿ ನೇಮಕವಾಗಬೇಕಾಗುತ್ತದೆ. ಈ ಪ್ರಕರಣ ಸಾಬೀತಾದರೆ ಬಿಸಿಸಿಐ ಮುಜುಗರಕ್ಕೀಡಾಗುವುದು ಖಂಡಿತಾ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ ನಲ್ಲಿ ಧೋನಿ ಔಟಾದಾಗ ಈ ಸಹ ಕ್ರಿಕೆಟಿಗ ಕಣ್ಣೀರು ಹಾಕಿದ್ದರಂತೆ!

ಮುಂಬೈ: ಇತ್ತೀಚೆಗೆ ನಡೆದಿದ್ದ ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿ ಧೋನಿ ಔಟಾದಾಗ ಎಲ್ಲರಿಗೂ ...

news

ನಾನು ಮಾಡಿದ ತಪ್ಪು ರೋಹಿತ್ ಶರ್ಮಾ ಮಾಡದಿರಲಿ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದೇಕೆ?

ಮುಂಬೈ: ಟೀಂ ಇಂಡಿಯಾ ಟೆಸ್ಟ್ ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲಿರುವ ರೋಹಿತ್ ಶರ್ಮಾ ನಾನು ಮಾಡಿದ ...

news

ಶತಕ ಸಿಡಿಸಿ ಆಯ್ಕೆಗಾರರನ್ನು ಇಕ್ಕಟ್ಟಿಗೆ ಸಿಲುಕಿಸಿದ ಕೆಎಲ್ ರಾಹುಲ್

ಬೆಂಗಳೂರು: ಕೇರಳ ವಿರುದ್ಧ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಪರ ಆಡಿದ ಕೆಎಲ್ ರಾಹುಲ್ ಶತಕ ...

news

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಇಂದು ಕೇರಳ ಸವಾಲು

ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಏಕದಿನ ಕೂಟದಲ್ಲಿ ಇಂದು ಕರ್ನಾಟಕಕ್ಕೆ ಕೇರಳ ಎದುರಾಳಿಯಾಗಿದೆ. ಕಳೆದ ...