ಇಂಗ್ಲೆಂಡ್ ಗೆ ಆರಂಭಿಕ ಆಘಾತ ಕೊಟ್ಟ ಟೀಂ ಇಂಡಿಯಾ ವೇಗಿಗಳು

ಟ್ರೆಂಟ್ ಬ್ರಿಡ್ಜ್| Krishnaveni K| Last Modified ಬುಧವಾರ, 4 ಆಗಸ್ಟ್ 2021 (17:20 IST)
ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನ ಮೊದಲ ಎರಡು ವಿಕೆಟ್ ಕಿತ್ತಿರುವ ಟೀಂ ಇಂಡಿಯಾ ವೇಗಿಗಳು ಎದುರಾಳಿಗಳಿಗೆ ಆರಂಭಿಕ ಆಘಾತ ಕೊಟ್ಟಿದ್ದಾರೆ.

 
ಆದರೆ ಇಷ್ಟಕ್ಕೇ ಸಮಾಧಾನಗೊಳ್ಳಬೇಕಿಲ್ಲ. ಸದ್ಯಕ್ಕೆ ಪಿಚ್ ವೇಗಿಗಳ ಸ್ವರ್ಗದಂತೆ ಕಾಣುತ್ತಿದೆ. ಇದರಿಂದಾಗಿ ಭಾರತಕ್ಕೂ ಇಂಗ್ಲೆಂಡ್ ವೇಗಿಗಳನ್ನು ಎದುರಿಸುವುದು ಸವಾಲಾಗಲಿದೆ.
 
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದು ಇತ್ತೀಚೆಗಿನ ವರದಿ ಬಂದಾಗ ಇಂಗ್ಲೆಂಡ್ 2 ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿ ನಿಧಾನಗತಿಯ ಬ್ಯಾಟಿಂಗ್ ಮಾಡುತ್ತಿದೆ. ಭಾರತದ ಪರ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಕಬಳಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :