ವಿಶ್ವಕಪ್ 2019: ಟೀಂ ಇಂಡಿಯಾಗೆ ಇಂದು ಲಂಕನ್ನರ ಸವಾಲು

ಲಂಡನ್, ಶನಿವಾರ, 6 ಜುಲೈ 2019 (09:10 IST)

ಲಂಡನ್: ರಲ್ಲಿ ಅಂತಿಮ ಲೀಗ್ ಪಂದ್ಯವಾಡಲು ಸಿದ್ಧವಾಗಿರುವ ಟೀಂ ಇಂಡಿಯಾ ಇಂದು ಶ್ರೀಲಂಕಾ ತಂಡವನ್ನು ಎದುರಿಸಲಿದೆ.


 
ಈಗಾಗಲೇ ಸೆಮಿಫೈನಲ್ ಗೆ ಲಗ್ಗೆಯಿಟ್ಟಿರುವ ಟೀಂ ಇಂಡಿಯಾಗೆ ಇದು ಔಪಚಾರಿಕ ಪಂದ್ಯವಷ್ಟೇ. ಹಾಗಿದ್ದರೂ ಅಂಕ ಸುಧಾರಿಸುವ ನಿಟ್ಟಿನಲ್ಲಿ ಈ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯ.
 
ಆದರೆ ಅತ್ತ ಶ್ರೀಲಂಕಾ ಈಗಾಗಲೇ ಕೂಟದಿಂದ ನಿರ್ಗಮಿಸಿದರೂ ಕೊನೆಯ ಪಂದ್ಯವನ್ನು ಗೆದ್ದು ವಿದಾಯ ಹೇಳಲು ಕಾತುರವಾಗಿದೆ. ಆದರೆ ಅದಕ್ಕೆ ಭಾರತದ ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ಎದುರಿಸುವ ಕಠಿಣ ಸವಾಲು ಇದೆ.
 
ಟೀಂ ಇಂಡಿಯಾದಲ್ಲಿ ಇಂದಿನ ಪಂದ್ಯಕ್ಕೆ ಬದಲಾವಣೆ ಸಾಧ್ಯತೆಯಿಲ್ಲ. ಹಾಗಿದ್ದರೂ ಒಂದು ವೇಳೆ ಇದುವರೆಗೆ ಅವಕಾಶ ಸಿಗದ ಆಟಗಾರರಿಗೆ ಕೊಹ್ಲಿ ಅವಕಾಶ ನೀಡಲು ಮನಸ್ಸು ಮಾಡಿದರೆ ರವೀಂದ್ರ ಜಡೇಜಾ, ಮಯಾಂಕ್ ಅಗರ್ವಾಲ್ ಗೆ ಸ್ಥಾನ ಸಿಕ್ಕರೂ ಅಚ್ಚರಿಯಿಲ್ಲ. ಆದರೆ ಕೊಹ್ಲಿ ಈ ಪಂದ್ಯವನ್ನು ಹಗುರವಾಗಿ ತೆಗೆದುಕೊಳ್ಳುವ ಸಾಧ್ಯತೆಯಿಲ್ಲ. ಭಾರತಕ್ಕೆ ಮಧ್ಯಮ ಮತ್ತು ಕೊನೆಯ ಕ್ರಮಾಂಕದಲ್ಲಿ ರನ್ ಸರಾಗವಾಗಿ ಹರಿದುಬರುವುದರತ್ತ ಹೆಚ್ಚು ಗಮನ ಕೊಡಬೇಕಿದೆ. ಹಾಗೂ ಫೀಲ್ಡಿಂಗ್ ಸುಧಾರಿಸಲು ಹೆಚ್ಚು ಒತ್ತು ನೀಡಬೇಕಿದೆ. ಸೆಮಿಫೈನಲ್ ನಲ್ಲಿ ಕಠಿಣ ಎದುರಾಳಿ ಸಿಗುವುದು ಖಚಿತವಾದ್ದರಿಂದ ಈ ಪಂದ್ಯವನ್ನು ರಿಹರ್ಸಲ್ ಗೆ ಸಿಕ್ಕ ವೇದಿಕೆ ಎಂದು ಭಾರತ ಬಳಸಿಕೊಳ್ಳಬೇಕಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ 2019: ಶ್ರೀಲಂಕಾ ವಿರುದ್ಧ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರ ಸುತ್ತಾಟ

ಲಂಡನ್: ನಾಳೆ ವಿಶ್ವಕಪ್ ಕೂಟದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಪಂದ್ಯ ನಡೆಯಲಿದ್ದು, ಈ ಔಪಚಾರಿಕ ...

news

ಧೋನಿ ನಿವೃತ್ತಿಗೆ ಸಿಕ್ಕಿದೆ ಮಹತ್ವದ ಸುಳಿವು!

ಲಂಡನ್: ಈ ಬಾರಿಯ ವಿಶ್ವಕಪ್ ನಲ್ಲಿ ಭಾರತ ಆಡುವ ಕೊನೆಯ ಪಂದ್ಯವೇ ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ...

news

87 ರ ಅಭಿಮಾನಿ ಅಜ್ಜಿಗೆ ನೀಡಿದ ಪ್ರಾಮಿಸ್ ಉಳಿಸಿಕೊಂಡ ವಿರಾಟ್ ಕೊಹ್ಲಿ

ಲಂಡನ್: ಬಾಂಗ್ಲಾದೇಶ ವಿರುದ್ಧ ವಿಶ್ವಕಪ್ ಪಂದ್ಯದ ವೇಳೆ ಮೈದಾನದಲ್ಲಿ ಕುಳಿತು ಟೀಂ ಇಂಡಿಯಾ ...

news

ವಿಶ್ವಕಪ್ 2019: ಸೆಮಿಫೈನಲ್ ನಲ್ಲಿ ಟೀಂ ಇಂಡಿಯಾಗೆ ಯಾರಾಗ್ತಾರೆ ಎದುರಾಳಿ? ಇಲ್ಲಿದೆ ಲೆಕ್ಕಾಚಾರ

ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರ ಕೊನೆಯ ಘಟ್ಟಕ್ಕೆ ಬಂದು ತಲುಪಿದೆ. ಇದೀಗ ಸೆಮಿಫೈನಲ್ ಗೆ ತಲುಪಲಿರುವ ...