Widgets Magazine

ಬಾಂಗ್ಲಾ, ಶ್ರೀಲಂಕಾ ಎದುರು ಟೀಂ ಇಂಡಿಯಾ ಬೇಕೆಂದೇ ಸೋಲಲಿದೆ ಎಂದು ಗಂಭೀರ ಆರೋಪ ಮಾಡಿದ ಪಾಕ್ ಮಾಜಿ ಕ್ರಿಕೆಟಿಗ

ಲಂಡನ್| Krishnaveni K| Last Modified ಶನಿವಾರ, 29 ಜೂನ್ 2019 (09:52 IST)
ಲಂಡನ್: ರಲ್ಲಿ ಪಾಕಿಸ್ತಾನ ಈಗ ಅದೃಷ್ಟದ ಬಲದಿಂದ ಸೆಮಿಫೈನಲ್ ಗೇರುವ ಅವಕಾಶಕ್ಕಾಗಿ ಕಾಯುತ್ತಿದೆ. ಈ ನಡುವೆ ಭಾರತ ಕ್ರಿಕೆಟ್ ತಂಡದ ವಿರುದ್ಧ ಪಾಕ್ ಮಾಜಿ ಕ್ರಿಕೆಟಿಗ ಬಸಿತ್ ಅಲಿ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

 
ಇಂಗ್ಲೆಂಡ್ ಪಂದ್ಯದ ಬಳಿಕ ಭಾರತ ಶ್ರೀಲಂಕಾ ಮತ್ತು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಆದರೆ ಪಾಕಿಸ್ತಾನವನ್ನು ಸೆಮಿಫೈನಲ್ ನಿಂದ ದೂರವಿಡಲು ಟೀಂ ಇಂಡಿಯಾ ಈ ಎರಡೂ ಪಂದ್ಯಗಳನ್ನು ಬೇಕೆಂದೇ ಸೋಲಲಿದೆ ಎಂದು ಬಸಿತ್ ಹೇಳಿಕೊಂಡಿದ್ದಾರೆ.
 
ಅಷ್ಟೇ ಅಲ್ಲದೆ, ಅಫ್ಘಾನಿಸ್ತಾನದ ವಿರುದ್ಧ ಟೀಂ ಇಂಡಿಯಾ ಬೇಕೆಂದೇ ಕಳಪೆ ಪ್ರದರ್ಶನ ನೀಡಿದೆ. ಭಾರತದ ವಿರುದ್ಧ ಆಸ್ಟ್ರೇಲಿಯಾ ಆರಂಭಿಕ ಡೇವಿಡ್ ವಾರ್ನರ್ ಬೇಕೆಂದೇ ಬೇಗನೇ ಔಟ್ ಆದರು ಎಂದೂ ಬಸಿತ್ ಕಾರ್ಯಕ್ರಮವೊಂದರಲ್ಲಿ ಆರೋಪಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :