ಮುಂಬೈ: ನಾಯಕತ್ವದ ವಿಚಾರದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ದಿಗ್ಗಜ ನಾಯಕರಾದ ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ರನ್ನೇ ಹಿಂದಿಕ್ಕುವ ಹಂತದಲ್ಲಿದ್ದಾರೆ.ಈಗಾಗಲೇ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತೀಯ ಕ್ರಿಕೆಟ್ ನಾಯಕರ ಪೈಕಿಯೇ ಅತೀ ಹೆಚ್ಚು ಗೆಲುವು ದಾಖಲಿಸಿ ನಂ.1 ಪಟ್ಟಕ್ಕೇರಿರುವ ಕೊಹ್ಲಿ ಇದೀಗ ಜಾಗತಿಕ ದಾಖಲೆ ಮಾಡಲಿದ್ದಾರೆ.ದ.ಆಫ್ರಿಕಾ ವಿರುದ್ಧ ಪುಣೆಯಲ್ಲಿ ಗೆಲುವು ಸಾಧಿಸುವುದರೊಂದಿಗೆ ಕೊಹ್ಲಿ ನಾಯಕರಾಗಿ 30 ನೇ ಗೆಲುವು ಕಂಡಿದ್ದಾರೆ. ಇದರೊಂದಿಗೆ ಜಾಗತಿಕವಾಗಿಯೂ ರಿಕಿ