Widgets Magazine

ಅರ್ಧಶತಕದ ಬಳಿಕ ಅಭಿಮಾನಿಗಳ ಆಸೆ ಪೂರೈಸಿದ ವಿರಾಟ್ ಕೊಹ್ಲಿ

ಜಮೈಕಾ| Krishnaveni K| Last Modified ಶನಿವಾರ, 31 ಆಗಸ್ಟ್ 2019 (10:20 IST)
ಜಮೈಕಾ: ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನ ಅರ್ಧಶತಕ ಸಿಡಿಸಿ ಪ್ರೇಕ್ಷಕರನ್ನು ರಂಜಿಸಿದ ನಾಯಕ ವಿರಾಟ್ ಕೊಹ್ಲಿ ಬಳಿಕ ಅಭಿಮಾನಿಗಳ ಆಸೆ ನೆರವೇರಿಸಿದ್ದಾರೆ.

 

ದಿನದಾಟದ ಬಳಿಕ ಪೆವಿಲಿಯನ್ ಗೆ ಮರಳುವಾಗ ಕೊಹ್ಲಿ ತಮ್ಮನ್ನು ಕಾಯುತ್ತಿದ್ದ ಅಭಿಮಾನಿಗಳನ್ನು ನಿರಾಸೆಗೊಳಪಡಿಸದೇ ಅವರ ಆಸೆಯಂತೇ ಆಟೋಗ್ರಾಫ್ ನೀಡಿದ್ದಾರೆ.
 
ತಮ್ಮನ್ನು ಕಾಯುತ್ತಿದ್ದ ಅಭಿಮಾನಿಗಳಿಗೆ ಪ್ರತಿಯೊಬ್ಬರಿಗೂ ಆಟೋಗ್ರಾಫ್, ಸೆಲ್ಫೀ ನೀಡಿ ಖುಷಿಪಡಿಸಿದರು. ವಿದೇಶಗಳಲ್ಲಿದ್ದಾಗಲೂ ಕೊಹ್ಲಿ ತಮ್ಮ ಅಭಿಮಾನಿಗಳ ಜತೆ ಈ ರೀತಿ ನಡೆದುಕೊಳ್ಳುವುದಕ್ಕೆ ಅಭಿಮಾನಿಗಳು ಅವರನ್ನು ಇಷ್ಟಪಡುತ್ತಾರೆ.
ಇದರಲ್ಲಿ ಇನ್ನಷ್ಟು ಓದಿ :