ಈ ವರ್ಷ ವಿರಾಟ್ ಕೊಹ್ಲಿಗೆ ಕಾಡಿದ ಆ 30 ನಿಮಿಷಗಳ ಕಹಿ ಘಟನೆ ಯಾವುದು ಗೊತ್ತಾ?

ಕಟಕ್| Krishnaveni K| Last Modified ಸೋಮವಾರ, 23 ಡಿಸೆಂಬರ್ 2019 (09:40 IST)
ಕಟಕ್: 2019 ರ ಈ ವರ್ಷ ಮುಗಿಯುವ ಹೊಸ್ತಿಲಲ್ಲಿದೆ. ಈ ವೇಳೆ ಟೀಂ ಇಂಡಿಯಾಗೆ ಈ ವರ್ಷದ ಶುಭ ಮತ್ತು ಕೆಟ್ಟ ಗಳಿಗೆ ಯಾವುದು ಎಂಬುದನ್ನು ನಾಯಕ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ.

 
ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ಗೆದ್ದ ಬಳಿಕ ಮಾತನಾಡಿದ ಕೊಹ್ಲಿ ಆ 30 ನಿಮಿಷಗಳ ಕೆಟ್ಟ ಕ್ರಿಕೆಟ್ ಹೊರತಾಗಿ ಉಳಿದೆಲ್ಲವೂ ಅದ್ಭುತವಾಗಿತ್ತು ಎಂದು ಹೇಳಿಕೊಂಡಿದ್ದಾರೆ.
 
ಕೊಹ್ಲಿ ಹೇಳಿದ ಆ ಮೂವತ್ತು ನಿಮಿಷಗಳ ಅವಧಿ ಈ ವರ್ಷ ಇಂಗ್ಲೆಂಡ್ ನಲ್ಲಿ ನಡೆದಿದ್ದ ವಿಶ್ವಕಪ್ ಸೆಮಿಫೈನಲ್ ಪಂದ್ಯ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 30 ನಿಮಿಷ ಕೆಟ್ಟದಾಗಿ ಆಡಿದ್ದರ ಪರಿಣಾಮ ವಿಶ್ವಕಪ್ ಕೈ ಜಾರಿತ್ತು. ಅದನ್ನು ಬಿಟ್ಟರೆ ಉಳಿದೆಲ್ಲಾ ಕ್ಷಣಗಳೂ ಉತ್ತಮವಾಗಿತ್ತು ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :