ಟಿವಿ ಕಾರ್ಯಕ್ರಮದಲ್ಲಿ ಸೆಹ್ವಾಗ್ ಮಾಡಿದ್ದು ನೋಡಿ ಕಣ್ಣಂಚಲಿ ನೀರು ತುಂಬಿಕೊಂಡರು ಸೌರವ್ ಗಂಗೂಲಿ!

ನವದೆಹಲಿ| Krishnaveni K| Last Modified ಬುಧವಾರ, 4 ಜುಲೈ 2018 (09:18 IST)
ನವದೆಹಲಿ: ವೀರೇಂದ್ರ ಸೆಹ್ವಾಗ್ ಎಲ್ಲಿಯೇ ಹೋಗಲಿ ತಮ್ಮ ಯಶಸ್ಸಿಗೆ ಅಂದು ನಾಯಕರಾಗಿದ್ದ ಸೌರವ್ ಗಂಗೂಲಿಗೆ ವಿಶೇಷ ಕ್ರೆಡಿಟ್ ಸಲ್ಲಿಸುತ್ತಾರೆ. ಆದರೆ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಸೆಹ್ವಾಗ್ ಮಾಡಿದ್ದು ನೋಡಿ ಗಂಗೂಲಿ ಭಾವುಕರಾದ ಘಟನೆ ನಡೆದಿದೆ.

ಕ್ರಿಕೆಟ್ ಕುರಿತಾದ ಚರ್ಚಾ ಕಾರ್ಯಕ್ರಮಕ್ಕೆ ಗಂಗೂಲಿ ಹಾಗೂ ಸೆಹ್ವಾಗ್ ವಾಹಿನಿಗೆ ಬಂದಿದ್ದರು. ಇಬ್ಬರಿಗೂ ಅಕ್ಕಪಕ್ಕ ಕುರ್ಚಿ ಹಾಕಲಾಗಿತ್ತು. ಆದರೆ ಗಂಗೂಲಿ ಪಕ್ಕ ಬಂದ ಸೆಹ್ವಾಗ್ ತಮಗೆ ಮೀಸಲಾಗಿದ್ದ ಕುರ್ಚಿಯ ಎತ್ತರವನ್ನು ಕೊಂಚ ತಗ್ಗಿಸಿ ಕುಳಿತರು.


ಯಾಕೆ ಹೀಗೆ ಮಾಡಿದಿರಿ ಎಂದು ಅವರನ್ನು ಕೇಳಿದಾಗ ನೀಡಿದ ಉತ್ತರ ಕೇಳಿ ಸ್ವತಃ ಗಂಗೂಲಿ ಕಣ್ಣಾಲಿ ತುಂಬಿ ಬಂದಿತ್ತು. ‘ಒಬ್ಬ ಆಟಗಾರ ಯಾವತ್ತೂ ನಾಯಕನಿಂದ ದೊಡ್ಡವನಾಗಲು ಸಾಧ್ಯವಿಲ್ಲ. ಯಾವ ವ್ಯಕ್ತಿ ನಮ್ಮನ್ನು ಇಂದು ನಾವು ಏನಾಗಿದ್ದೇವೋ ಆ ಮಟ್ಟಕ್ಕೆ ಏರಿಸಿದ್ದಾರೋ, ಅವರೇ ಗಂಗೂಲಿ’ ಎಂದು ಸೆಹ್ವಾಗ್ ತಮ್ಮ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದ ಕ್ಯಾಪ್ಟನ್ ಗೆ ಗೌರವ ಸಲ್ಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :