Widgets Magazine

ಮಹಿಳಾ ಟಿ20 ವಿಶ್ವಕಪ್ ಫೈನಲ್: ಮಹಿಳಾ ದಿನಕ್ಕೆ ಭಾರತೀಯರಿಗೆ ಗಿಫ್ಟ್ ಸಿಗಬಹುದೇ?

ಸಿಡ್ನಿ| Krishnaveni K| Last Modified ಭಾನುವಾರ, 8 ಮಾರ್ಚ್ 2020 (09:32 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದ್ದು, ಭರ್ಜರಿ ಪ್ರದರ್ಶನ ನೀಡಿರುವ ಭಾರತೀಯ ಮಹಿಳೆಯರು ಮತ್ತು ಅತಿಥೇಯ ಆಸ್ಟ್ರೇಲಿಯಾ ನಡುವೆ ಗೆಲ್ಲುವವರು ಯಾರು ಎಂಬ ಕುತೂಹಲ ಮೂಡಿದೆ.

 
ಭಾರತ ಮಹಿಳಾ ತಂಡ ಇಂದು ಗೆದ್ದರೆ ಅದು ಮಹಿಳಾ ದಿನಕ್ಕೆ ಭಾರತೀಯರಿಗೆ ಸಿಗುವ ಭರ್ಜರಿ ಗಿಫ್ಟ್ ಆಗಲಿದೆ. ಇಂದು ಗೆದ್ದರೆ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಸಾಧನೆ ಮಾಡಲಿದೆ.
 
ಇದುವರೆಗೆ ಟೂರ್ನಿಯಲ್ಲಿ ಒಂದೇ ಸೋಲು ಕಾಣದ ಭಾರತ ಲೀಗ್ ಪಂದ್ಯದಲ್ಲಿ ಮೊದಲ ಪಂದ್ಯದಲ್ಲಿಯೇ ಆಸ್ಟ್ರೇಲಿಯಾವನ್ನು ಮಣಿಸಿತ್ತು. ಆದರೆ ಫೈನಲ್ ಎಂದಾಗ ನಿರೀಕ್ಷೆಯೇ ಬೇರೆ ಇರುತ್ತದೆ. ಹೀಗಾಗಿ ತವರು ನೆಲದಲ್ಲಿ ಆಸೀಸ್ ನ್ನು ಮಣಿಸುವುದು ಅಷ್ಟು ಸುಲಭದ ಮಾತಲ್ಲ. ಪಂದ್ಯ ಮಧ್ಯಾಹ್ನ 12.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.
ಇದರಲ್ಲಿ ಇನ್ನಷ್ಟು ಓದಿ :