ವಿಶ್ವಕಪ್ 2019: ಓವಲ್ ಮೈದಾನದಲ್ಲಿ ಭಾರತೀಯ ಪ್ರೇಕ್ಷಕರನ್ನು ಕಂಡು ದಂಗಾದ ಕಾಮೆಂಟೇಟರ್ ಗಳು!

ಲಂಡನ್, ಸೋಮವಾರ, 10 ಜೂನ್ 2019 (09:26 IST)

ಲಂಡನ್: ವಿಶ್ವಕಪ್ 2019 ರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾಗಿದ್ದ ಅಸಂಖ್ಯಾತ ಅಭಿಮಾನಿಗಳ ಬೆಂಬಲ ನೋಡಿ ವೀಕ್ಷಕ ವಿವರಣೆಕಾರರಾದ ಖ್ಯಾತ ಮಾಜಿ ಕ್ರಿಕೆಟಿಗರು ದಂಗಾಗಿದ್ದಾರೆ.
 


ಓವಲ್ ಮೈದಾನ ಸಂಪೂರ್ಣವಾಗಿ ನೀಲಿ ಟಿ ಶರ್ಟ್ ತೊಟ್ಟ ಭಾರತೀಯ ಪ್ರೇಕ್ಷಕರಿಂದಲೇ ಭರ್ತಿಯಾಗಿತ್ತು. ಇವರ ಮಧ್ಯೆ ಕೆಲವೇ ಕೆಲವು ಹಳದಿ ಶರ್ಟ್ ತೊಟ್ಟ ಆಸೀಸ್ ಸಮರ್ಥಕರಿದ್ದರು. ಅಷ್ಟೇ ಅಲ್ಲದೆ, ಧೋನಿಗೆ ಗ್ಲೌಸ್ ನಲ್ಲಿ ಬಲಿದಾನ ಚಿಹ್ನೆ ಬಳಸಬಾರದು ಎಂದು ಐಸಿಸಿ ತಾಕೀತು ಮಾಡಿದ್ದಕ್ಕೆ ತಾವೇ ಬಲಿದಾನ ಚಿಹ್ನೆ ಪ್ರದರ್ಶಿಸಿದ್ದಾರೆ.
 
ಇವರನ್ನು ನೋಡಿ ವೀಕ್ಷಕ ವಿವರಣೆಕಾರರಾದ ಮೈಕಲ್ ವಾನ್, ಆಸೀಸ್ ಮೂಲದ ಮೈಕಲ್ ಸ್ಲಾಟರ್ ದಂಗಾಗಿ ಹೋಗಿದ್ದಾರೆ. ಮೈಕಲ್ ಅಂತೂ ನಾನು ಕಾಮೆಂಟರಿ ಹೇಳುವುದನ್ನು ಬಿಟ್ಟು ಹಳದಿ ಶರ್ಟ್ ಹಂಚಲು ಹೋಗುವುದು ಒಳ್ಳೆಯದೇನೋ ಎಂದು ತಮಾಷೆ ಮಾಡಿಕೊಂಡಿದ್ದಾರೆ. ಅಂತೂ ಭಾರತೀಯ ಕ್ರಿಕೆಟಿಗರಿಗೆ ತವರಿನಲ್ಲಿ ಆಡಿದ ಅನುಭವವೇ ಆಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸಚಿನ್ ತೆಂಡುಲ್ಕರ್ ದಾಖಲೆ ಮುರಿದ ರೋಹಿತ್ ಶರ್ಮಾ

ಲಂಡನ್: ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ 2019 ರ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ...

news

ಆಸೀಸ್ ಕ್ರಿಕೆಟಿಗ ಸ್ಟೀವ್ ಸ್ಮಿತ್ ರನ್ನು ಭಾರತೀಯ ಪ್ರೇಕ್ಷಕರಿಂದ ಕಾಪಾಡಿದ ವಿರಾಟ್ ಕೊಹ್ಲಿ

ಲಂಡನ್: ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಬಾಲ್ ವಿರೂಪ ಪ್ರಕರಣದಲ್ಲಿ ಹಿಂದೊಮ್ಮೆ ...

news

ವಿಶ್ವಕಪ್ 2019: ಕೊನೆಯ ಹತ್ತು ಓವರ್ ಗಳಲ್ಲಿ ಮ್ಯಾಜಿಕ್ ಮಾಡಿದ ಟೀಂ ಇಂಡಿಯಾ ಬೌಲರ್ ಗಳು

ಲಂಡನ್: ಓವಲ್ ನಲ್ಲಿ ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ 36 ...

news

ವಿಶ್ವಕಪ್ 2019: ಲಕ್ಕಿ ಮೈದಾನದಲ್ಲಿ ವಿಜೃಂಭಿಸಿದ ಶಿಖರ್ ಧವನ್: ಆಸೀಸ್ ಬೌಲರ್ ಗಳು ಬೇಸ್ತು

ಲಂಡನ್: ಓವಲ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ 2019 ರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ...