Widgets Magazine

ವಿಶ್ವಕಪ್ 2019: ಟೀಂ ಇಂಡಿಯಾ ಬೌಲರ್ ಗಳ ಚೆಂಡಾಡಿದ ಇಂಗ್ಲೆಂಡ್

ಲಂಡನ್| Krishnaveni K| Last Modified ಭಾನುವಾರ, 30 ಜೂನ್ 2019 (18:50 IST)
ಲಂಡನ್: ಯೋಜಿತವಲ್ಲದ ಬೌಲಿಂಗ್, ಕಳಪೆ ಫೀಲ್ಡಿಂಗ್ ನ ಭರಪೂರ ಲಾಭವೆತ್ತಿರುವ ಅತಿಥೇಯ ಇಂಗ್ಲೆಂಡ್ ಟೀಂ ಇಂಡಿಯಾ ಗೆಲುವಿಗೆ 338 ರನ್ ಗಳ ಬೃಹತ್ ಗುರಿ ನೀಡಿದೆ.

 
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿದೆ. ಆರಂಭದಲ್ಲಿ ಕೊಂಚ ನಿಧಾನವಾಗಿ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 10 ಓವರ್ ಗಳ ನಂತರ ಸ್ಪಿನ್ನರ್ ಗಳು ದಾಳಿಗಿಳಿಯುತ್ತಿದ್ದಂತೇ ಎರ್ರಾ ಬಿರ್ರಿ ರನ್ ಚಚ್ಚಿದರು. ಅದರಲ್ಲೂ ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ಎಸೆತಗಳನ್ನು ಇಂಗ್ಲೆಂಡ್ ಆರಂಭಿಕರು ಮನಸೋ ಇಚ್ಛೆ ದಂಡಿಸಿದರು. ಇದರಿಂದಾಗಿ ಜೇಸನ್ ರಾಯ್ ಅರ್ಧ ಶತಕ ಗಳಿಸಿದರೆ ಜಾನಿ ಬೇರ್ ಸ್ಟೋ ಶತಕ ಗಳಿಸಿದರು.
 
ನಂತರ ಬಂದ ಜೋ ರೂಟ್ 44, ಬೆನ್ ಸ್ಟೋಕ್ಸ್  79 ರನ್ ಗಳಿಸಿ ಇಂಗ್ಲೆಂಡ್ ಮೊತ್ತ ಉಬ್ಬಿಸಿದರು. ಪ್ರತೀ ಓವರ್ ಗೆ ಒಂದರಂತೆ ಸಿಕ್ಸರ್ ಸಿಡಿಸುತ್ತಾ ಸಾಗಿದ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ಭಾರತೀಯ ಬೌಲರ್ ಗಳಿಗೆ ತಲೆನೋವಾದರು. ಈ ನಡುವೆ ಮೊಹಮ್ಮದ್ ಶಮಿ 4 ವಿಕೆಟ್ ಪಡೆದರು. ಆದರೆ ಜಸ್ಪ್ರೀತ್ ಬುಮ್ರಾ ರನ್ ನಿಯಂತ್ರಿಸಿದರೂ ಪ್ರಮುಖ ಹಂತದಲ್ಲಿ ವಿಕೆಟ್ ಗಳಿಸಲು ವಿಫಲವಾಗಿದ್ದು ಭಾರತಕ್ಕೆ ದೊಡ್ಡ ಹೊಡೆತ ನೀಡಿತು. ಒಂದು ವೇಳೆ ಭಾರತ ಈ ಮೊತ್ತವನ್ನು ಯಶಸ್ವಿಯಾಗಿ ಬೆನ್ನತ್ತಿದರೆ ಅದು ದಾಖಲೆಯಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :