ಲಂಡನ್: ವಿಶ್ವಕಪ್ ಕೂಟದಲ್ಲಿ ಇಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ಮಹತ್ವದ ಪಂದ್ಯ ನಡೆಯಲಿದ್ದು, ಇಂದು ಟೀಂ ಇಂಡಿಯಾ ಗೆಲುವಿಗಾಗಿ ಪಾಕಿಸ್ತಾನ, ಬಾಂಗ್ಲಾ ತಂಡಗಳೂ ಪ್ರಾರ್ಥಿಸುವಂತೆ ಆಗಿದೆ. ನಿರ್ಣಾಯಕ ಘಟ್ಟ ತಲುಪಿರುವ ವಿಶ್ವಕಪ್ ಕೂಟದಲ್ಲಿ ಇಂದು ಭಾರತ ಗೆದ್ದರೆ ಸೆಮಿಫೈನಲ್ ಗೇರಲಿದೆ. ಇದುವರೆಗೆ ಸೋಲರಿಯದೇ ಮುನ್ನುಗ್ಗುತ್ತಿರುವ ಭಾರತಕ್ಕೆ ಇಂದು ಸೋತರೂ ನಷ್ಟವಿಲ್ಲ. ಆದರೆ ಟೀಂ ಇಂಡಿಯಾ ಸೋತರೆ ನಷ್ಟವಾಗುವುದು ಇತರ ಮೂರು ತಂಡಗಳಿಗೆ! ಹೀಗಾಗಿ ಇಂದು ಭಾರತ ಗೆಲ್ಲಲಿ ಎಂದು