Widgets Magazine

ವಿಶ್ವಕಪ್ 2019: ಟೀಂ ಇಂಡಿಯಾಗೆ ಇಂದು ಕೀವೀಸ್ ಎದುರಾಳಿ, ಓಪನರ್ ಗಳ ಮೇಲೇ ಕಣ್ಣು

ಲಂಡನ್| Krishnaveni K| Last Modified ಗುರುವಾರ, 13 ಜೂನ್ 2019 (09:19 IST)
ಲಂಡನ್: ರ ಮೂರನೇ ಪಂದ್ಯವನ್ನು ಇಂದು ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಆಡಲಿದೆ.
 

ಈಗಾಗಲೇ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ಇದೀಗ ಮೂರನೇ ಗೆಲುವಿನತ್ತ ಕಣ್ಣು ನೆಟ್ಟಿದೆ. ಆದರೆ ಆರಂಭಿಕ ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಈ ಪಂದ್ಯದಲ್ಲಿ ಭಾರತ ತಂಡದಲ್ಲಿ ಯಾವೆಲ್ಲಾ ಬದಲಾವಣೆಗಳಾಗಲಿವೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.
 
ಮೂಲಗಳ ಪ್ರಕಾರ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿದು ನಾಲ್ಕನೇ ಕ್ರಮಾಂಕದಲ್ಲಿ ಅನುಭವಿ ದಿನೇಶ್ ಕಾರ್ತಿಕ್ ಅಥವಾ ಯುವ ಆಲ್ ರೌಂಡರ್ ವಿಜಯ್ ಶಂಕರ್ ಗೆ ಸ್ಥಾನ ಸಿಗುವ ಸಾಧ್ಯತೆಯಿದೆ. ಇದೊಂದು ಬದಲಾವಣೆ ಬಿಟ್ಟರೆ ಉಳಿದಂತೆ ಭಾರತ ತಂಡದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ಅತ್ತ ನ್ಯೂಜಿಲೆಂಡ್ ಗೂ ಮಳೆಯಿಂದಾಗಿ ಒಂದು ಪಂದ್ಯ ರದ್ದಾಗಿರುವುದರಿಂದ ಭಾರತದ ವಿರುದ್ಧ ಗೆಲ್ಲುವ ತವಕವಿದೆ. ಹೀಗಾಗಿ ಇಂದಿನ ಪಂದ್ಯ ಜಿದ್ದಾಜಿದ್ದಿನ ಕಣವಾಗುವ ನಿರೀಕ್ಷೆಯಿದೆ. ಆದರೆ ಮತ್ತೆ ಮಳೆ ಕಾಟ ಕೊಡದಿದ್ದರೆ ಸಾಕು ಎನ್ನುವುದೇ ಅಭಿಮಾನಿಗಳ ಪ್ರಾರ್ಥನೆ.
ಇದರಲ್ಲಿ ಇನ್ನಷ್ಟು ಓದಿ :