ಯಜುವೇಂದ್ರ ಚಾಹಲ್, ಕೃಷ್ಣಪ್ಪ ಗೌತಮ್ ಗೂ ಕೊರೋನಾ ದೃಢ

ಕೊಲೊಂಬೋ| Krishnaveni K| Last Modified ಶುಕ್ರವಾರ, 30 ಜುಲೈ 2021 (15:40 IST)
ಕೊಲೊಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಮತ್ತಿಬ್ಬರು ಕ್ರಿಕೆಟಿಗರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

 
ಕೃನಾಲ್ ಪಾಂಡ್ಯಗೆ ಕೊರೋನಾ ಪಾಸಿಟಿವ್ ಆದ ಬಳಿಕ ಪಂದ್ಯ ಒಂದು ದಿನ ಮುಂದೂಡಿಕೆಯಾಗಿತ್ತು. ಇದಾದ ಬಳಿಕ ಅವರ ನಿಕಟವರ್ತಿ ಕ್ರಿಕೆಟಿಗರನ್ನೂ ಪರಿಶೀಲನೆಯಲ್ಲಿಡಲಾಗಿತ್ತು.
 
ಇದೀಗ ಆ ಪೈಕಿ ಯಜುವೇಂದ್ರ ಚಾಹಲ್ ಮತ್ತು ಕೃಷ್ಣಪ್ಪ ಗೌತಮ್ ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದೀಗ ಈ ಕ್ರಿಕೆಟಿಗರು ಸರಣಿ ಮುಗಿದರೂ ಲಂಕಾದಲ್ಲಿಯೇ ಇರಲಿದ್ದು, ಗುಣಮುಖರಾದ ಬಳಿಕವಷ್ಟೇ ತವರಿಗೆ ವಾಪಸಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.




ಇದರಲ್ಲಿ ಇನ್ನಷ್ಟು ಓದಿ :