ಇಂಗ್ಲೆಂಡ್ ಸರಣಿಗೆ ಈ ಬೌಲರ್ ಇರಬೇಕಿತ್ತು: ಯುವರಾಜ್ ಸಿಂಗ್

ಲಂಡನ್| Krishnaveni K| Last Modified ಬುಧವಾರ, 4 ಆಗಸ್ಟ್ 2021 (11:46 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲು ಸಜ್ಜಾಗಿರುವ ಭಾರತಕ್ಕೆ ಅಲ್ಲಿನ ಸ್ವಿಂಗ್ ಆಗುವ ಪಿಚ್ ನಿಭಾಯಿಸುವ ತಲೆನೋವು ಎದುರಾಗಿದೆ.

 
ಇದರ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಇಂಗ್ಲೆಂಡ್ ಸರಣಿಯಲ್ಲಿ ಟೀಂ ಇಂಡಿಯಾದಲ್ಲಿ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್ ತಂಡದಲ್ಲಿರಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
 
‘ನಮ್ಮಲ್ಲಿ ಎಲ್ಲರೂ ಪ್ರತಿಭಾವಂತರೇ. ಆದರೆ ಇಂಗ್ಲೆಂಡ್ ಪರಿಸ್ಥಿತಿ ಬೇರೆಯೇ ಆಗಿರುತ್ತದೆ. ಅಲ್ಲಿ ಡ್ಯೂಕ್ ಬಾಲ್ ನಲ್ಲಿ ಸ್ವಿಂಗ್ ಬಾಲ್ ಮಾಡುವುದು ಹೇಗೆಂದು ಗೊತ್ತಿರಬೇಕು. ಆದರೆ ಭಾರತಕ್ಕೆ ಭುವನೇಶ್ವರ್ ಕುಮಾರ್ ನಂತಹ ಸ್ವಿಂಗ್ ಬೌಲರ್ ಅಗತ್ಯವಿದೆ’ ಎಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :