ಕಾಮೆಂಟರಿ ಬೇಕೋ? ಐಪಿಎಲ್ ಬೇಕೋ? ನೀವೇ ಆಯ್ಕೆ ಮಾಡಿ ಎಂದು ಗಂಗೂಲಿ, ಸಚಿನ್ ಗೆ ತಾಕೀತು ಮಾಡಿದ ಬಿಸಿಸಿಐ

ಮುಂಬೈ| Krishnaveni K| Last Modified ಶುಕ್ರವಾರ, 21 ಜೂನ್ 2019 (12:37 IST)
ಮುಂಬೈ: ಸ್ವಹಿತಾಸಕ್ತಿ ಹುದ್ದೆ ವಿವಾದ ಮತ್ತೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮತ್ತು ಸೌರವ್ ಗಂಗೂಲಿಗೆ ಉರುಳಾಗಿ ಪರಿಣಮಿಸುತ್ತಿದೆ. ಸುಪ್ರೀಂಕೋರ್ಟ್ ನಿಯಮಿತ ಆಡಳಿತ ಮಂಡಳಿಗೆ ಇಬ್ಬರೂ ಕ್ರಿಕೆಟಿಗರಿಗೆ ನುಂಗಲಾರದ ಬಿಸಿ ತುಪ್ಪವನ್ನು ನೀಡಿದೆ.

 
ಐಪಿಎಲ್ ನಲ್ಲಿ ಗಂಗೂಲಿ ಡೆಲ್ಲಿ ಪರ ಕೋಚ್ ಆಗಿದ್ದರೆ ಸಚಿನ್ ಮುಂಬೈ ತಂಡದ ಸಲಹೆಗಾರರಾಗಿದ್ದಾರೆ. ಇದೇ ವೇಳೆ ಬಿಸಿಸಿಐನ ಅಧಿಕೃತ ಕಾಮೆಂಟೇಟರ್ ಗಳ ಪಟ್ಟಿಯಲ್ಲೂ ಇಬ್ಬರೂ ಸ್ಥಾನ ಪಡೆದಿದ್ದಾರೆ.
 
ಹೀಗಾಗಿ ಇವೆರಡೂ ಜವಾಬ್ಧಾರಿಗಳನ್ನು ಏಕಕಾಲಕ್ಕೆ ನಿಭಾಯಿಸುವಂತಿಲ್ಲ. ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಇನ್ನೊಂದನ್ನು ಬಿಡುವಂತೆ ಬಿಸಿಸಿಐ ಕಟ್ಟುನಿಟ್ಟಾಗಿ ಸೂಚಿಸಿದೆ.ಇದೀಗ ಕ್ರಿಕೆಟಿಗರು ಒಂದು ಹುದ್ದೆಯನ್ನು ಬಿಡಬೇಕಾದ ಅನಿವಾರ್ಯತೆಯಲ್ಲಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :