ಧೋನಿ ರಿಟೈರ್ ಮೆಂಟ್ ಟ್ರೆಂಟ್ ಗೆ ಅಭಿಮಾನಿಗಳು ಗರಂ

ಮುಂಬೈ| Krishnaveni K| Last Modified ಬುಧವಾರ, 30 ಅಕ್ಟೋಬರ್ 2019 (11:45 IST)
ಮುಂಬೈ: ಟ್ವಿಟರ್ ನಲ್ಲಿ ಮೊನ್ನೆ ದಿನವಿಡೀ ಧೋನಿ ರಿಟೈರ್ ಮೆಂಟ್ ವಿಚಾರ ಟ್ರೆಂಡ್ ಆಗಿತ್ತು. ಆದರೆ ಅದೀಗ ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

 
ಧೋನಿರಿಟೈರ್ ಮೆಂಟ್ ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಈ ವಿಚಾರ ಟ್ರೆಂಡ್ ಆಗಿರುವುದಕ್ಕೆ ಧೋನಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವಾಗ ನಿವೃತ್ತಿಯಾಗಬೇಕು ಎಂಬುದು ಧೋನಿಗೆ ಗೊತ್ತು. ನೀವೇನು ಅದನ್ನು ಟ್ರೆಂಡ್ ಮಾಡೋದು ಎಂದು ಧೋನಿ ಅಭಿಮಾನಿಗಳು ಕಿಡಿಕಾರಿದ್ದಾರೆ.
 
ನಾವು ಸಾಯುವಾಗ ಕೊನೆಯ ಕ್ಷಣದಲ್ಲೂ ನೋಡಲು ಬಯಸುವುದು ಧೋನಿ 2011 ರ ವಿಶ್ವಕಪ್ ಫೈನಲ್ ನಲ್ಲಿ ಹೊಡೆದ ಸಿಕ್ಸರ್. ಧೋನಿ ಟೀಂ ಇಂಡಿಯಾಗೇ ಒಂದು ಸಂಪತ್ತು. ಅವರ ಬಗ್ಗೆ ಈ ರೀತಿ ಟ್ರೆಂಡ್ ಸೃಷ್ಟಿಸಬೇಡಿ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :