ಗಾಯ ಮುಚ್ಚಿಟ್ಟು ಸೇನೆ ಸೇರಿಕೊಂಡಿದ್ದ ಧೋನಿ!

ನವದೆಹಲಿ, ಬುಧವಾರ, 14 ಆಗಸ್ಟ್ 2019 (08:59 IST)

ನವದೆಹಲಿ: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಧೋನಿ ಹಲವು ಬಾರಿ ಗಾಯಗೊಂಡಿದ್ದರೂ ತಂಡಕ್ಕಾಗಿ ಅದನ್ನು ಮರೆತು ಪಂದ್ಯವಾಡಿದ ಹಲವು ಉದಾಹರಣೆಗಳಿವೆ ಎಂದು ಹಿಂದೊಮ್ಮೆ ಹೇಳಿಕೊಂಡಿದ್ದರು. ಇದೀಗ  ಧೋನಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವ ಸಲುವಾಗಿಯೂ ಅದನ್ನೇ ಮಾಡಿದ್ದಾರಂತೆ.


 
ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಧೋನಿ ಕೈ ಬೆರಳಿಗೆ ಗಾಯ ಮಾಡಿಕೊಂಡು ರಕ್ತ ಉಗುಳುತ್ತಿದ್ದ ಫೋಟೋಗಳು ವೈರಲ್ ಆಗಿತ್ತು. ಆಗ ಟೀಂ ಇಂಡಿಯಾ ಮೂಲಗಳು ಧೋನಿ ಗಾಯದ ಬಗ್ಗೆ ತುಟಿಪಿಟಕ್ ಎಂದಿರಲಿಲ್ಲ. ಆದರೆ ಧೋನಿ ಬೆರಳು ಮುರಿತಕ್ಕೊಳಗಾಗಿದ್ದರು ಎನ್ನಲಾಗಿದೆ. ಆದರೆ ವಿಶ್ವಕಪ್ ನ ಮುಂದಿನ ಪಂದ್ಯಗಳು ಮತ್ತು ನಂತರ ಸೇನೆ ಸೇರಲು ಅನರ್ಹ ಎಂದು ಎನಿಸಿಕೊಳ್ಳದೇ ಇರಲು ಧೋನಿ ಗಾಯ ಮುಚ್ಚಿಟ್ಟಿದ್ದರು ಎಂಬ ಅಂಶವನ್ನು ಆಂಗ್ಲ ಮಾಧ್ಯಮಗಳು ಬಹಿರಂಗಗೊಳಿಸಿವೆ.
 
ಧೋನಿಗೆ ಬೆರಳು ಮಡಚಲೂ ಆಗದಷ್ಟು ನೋವಿದ್ದರೂ ವೈದ್ಯರ ಬಳಿ ಹೋದರೆ ವಿಷಯ ಬಹಿರಂಗವಾಗಬಹುದು ಎಂದು ಮುಚ್ಚಿಟ್ಟಿದ್ದರಂತೆ. ಒಂದು ವೇಳೆ ಬೆರಳಿಗೆ ಗಾಯವಾಗಿದೆಯೆಂದಾಗಿದ್ದರೆ, ಅವರು ಸೇನೆಯಲ್ಲಿ ತರಬೇತಿ ಪಡೆಯಲು ಅನರ್ಹರಾಗಿರುತ್ತಿದ್ದರು. ಆದರೆ ಯಾವುದೇ ಕಾರಣಕ್ಕೂ ಯೋಧನಾಗಿ ಕರ್ತವ್ಯ ನಿಭಾಯಿಸುವ ಅವಕಾಶವನ್ನು ಕಳೆದುಕೊಳ್ಳಲು ಇಷ್ಟಪಡದ ಧೋನಿ ಇದನ್ನೆಲ್ಲಾ ಮುಚ್ಚಿಟ್ಟಿದ್ದರು ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಈ ಆರು ಘಟಾನುಘಟಿಗಳ ನಡುವೆ ಟೀಂ ಇಂಡಿಯಾ ಕೋಚ್ ಆಗುವವರು ಯಾರು?!

ಮುಂಬೈ: ಟೀಂ ಇಂಡಿಯಾಗೆ ನೂತನ ಕೋಚ್ ಆಯ್ಕೆ ಮಾಡುವ ಪ್ರಕ್ರಿಯೆ ಕೊನೆಯ ಹಂತ ತಲುಪಿದ್ದು, ನಾಳೆ ಈ ಪ್ರಶ್ನೆಗೆ ...

news

ಭಾರತ-ವೆಸ್ಟ್ ಇಂಡೀಸ್ ನಡುವೆ ತೃತೀಯ ಏಕದಿನ ಇಂದು: ನಾಲ್ಕರ ಸ್ಥಾನಕ್ಕೆ ಯಾರು ಎಂಬುದೇ ಪ್ರಶ್ನೆ

ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ತೃತೀಯ ಏಕದಿನ ಪಂದ್ಯ ನಡೆಯಲಿದ್ದು, ...

news

ವಿಂಡೀಸ್ ಆಟಗಾರನೊಂದಿಗೆ ಟೀಂ ಇಂಡಿಯಾ ಆಟಗಾರರ ಸುತ್ತಾಟ

ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧ ಕ್ರಿಕೆಟ್ ಸರಣಿ ಆಡಲು ಕೆರೆಬಿಯನ್ ನಾಡಿಗೆ ತೆರಳಿರುವ ಟೀಂ ...

news

ರಾಜಸ್ಥಾನ್ ರಾಯಲ್ಸ್ ನಾಯಕ ಅಜಿಂಕ್ಯಾ ರೆಹಾನೆಗೇ ಗಾಳ ಹಾಕುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್

ನವದೆಹಲಿ: ಐಪಿಎಲ್ ಗೆ ಇನ್ನೂ ಸಾಕಷ್ಟು ಸಮಯವಿದೆ. ಹಾಗಿದ್ದರೂ ತಮ್ಮ ತಮ್ಮ ತಂಡಕ್ಕೆ ಅತ್ಯುತ್ತಮ ...