Widgets Magazine

ವಿಮಾನ ನಿಲ್ದಾಣದ ನೆಲದ ಮೇಲೇ ಮಲಗಿ ರಾತ್ರಿ ಕಳೆದ ಧೋನಿ! ಪತ್ನಿ ಸಾಕ್ಷಿಯೂ ಸಾಥ್!

ಚೆನ್ನೈ| Krishnaveni K| Last Modified ಗುರುವಾರ, 11 ಏಪ್ರಿಲ್ 2019 (08:51 IST)
ಚೆನ್ನೈ: ಮೊನ್ನೆ ತಡರಾತ್ರಿ ಕೆಕೆಆರ್ ವಿರುದ್ಧದ ಐಪಿಎಲ್ ಪಂದ್ಯ ಮುಗಿದ ಮೇಲೆ ಜೈಪುರಕ್ಕೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದ ಧೋನಿ ವಿಮಾನ ನಿಲ್ದಾಣದ ನೆಲದ ಮೇಲೇ ಮಲಗಿ ನಿದ್ರೆ ಮಾಡಿದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 
ವಿಮಾನ ಬೆಳಗಿನ ಜಾವ ನಿಗದಿಯಾಗಿತ್ತು. ಆದರೆ ಧೋನಿ ಮತ್ತು ಚೆನ್ನೈ ತಂಡ ತಡ ರಾತ್ರಿ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಈ ವೇಳೆ ಧೋನಿ ಮತ್ತು ಪತ್ನಿ ಅಲ್ಲಿಯೇ ನೆಲದ ಮೇಲೆ ಬ್ಯಾಗ್ ನ್ನೇ ದಿಂಬು ಮಾಡಿಕೊಂಡು ಸಾಮಾನ್ಯರಂತೆ ಮಲಗಿ ನಿದ್ರಿಸಿದ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
 
ಅಭಿಮಾನಿಗಳು ಧೋನಿ ಸರಳತೆಯನ್ನು ಕೊಂಡಾಡಿದ್ದಾರೆ. ಸರಳತೆಗೆ ಮತ್ತೊಂದು ಹೆಸರು ಧೋನಿ ಎಂದು ಚೆನ್ನೈ ಅಭಿಮಾನಿಗಳು ಹೊಗಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :