ಟೀಂ ಇಂಡಿಯಾಗೆ ಉಚಿತವಾಗಿ ಕೆಲಸ ಮಾಡಲಿದ್ದಾರೆ ಧೋನಿ!

ಮುಂಬೈ| Krishnaveni K| Last Modified ಬುಧವಾರ, 13 ಅಕ್ಟೋಬರ್ 2021 (10:40 IST)
ಮುಂಬೈ: ಮುಂಬರುವ ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಮೆಂಟರ್ ಆಗಿ ಕೆಲಸ ಮಾಡಲಿರುವ ಮಾಜಿ ನಾಯಕ ಧೋನಿ ಉಚಿತವಾಗಿ ಕೆಲಸ ಮಾಡಲಿದ್ದಾರಂತೆ.
 > ಯುಎಇನಲ್ಲಿ ಅಕ್ಟೋಬರ್ 17 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಗೆ ಕೊಹ್ಲಿ ಬಳಗಕ್ಕೆ ಧೋನಿ ಮೆಂಟರ್ ಆಗಿ ಸಲಹೆ ನೀಡಲಿದ್ದಾರೆ. ಧೋನಿ ಉಪಸ್ಥಿತಿ ತಂಡದಲ್ಲಿ ಹೊಸ ಶಕ್ತಿ ತುಂಬಲಿದೆ.>   ಈ ಕೆಲಸಕ್ಕಾಗಿ ಧೋನಿ ಯಾವುದೇ ಶುಲ್ಕವಿಲ್ಲದೇ ಕೆಲಸ ಮಾಡಲಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಭಾರತಕ್ಕೆ ಟಿ20 ಮತ್ತು ಏಕದಿನ ವಿಶ್ವಕಪ್ ತಂದುಕೊಟ್ಟ ಧೋನಿ ಉಪಸ್ಥಿತಿಯಿಂದ ತಂಡದ ವಾತಾವರಣವೇ ಬದಲಾಗಲಿದೆ ಎಂಬ ನಂಬಿಕೆ ಎಲ್ಲರದ್ದು.ಇದರಲ್ಲಿ ಇನ್ನಷ್ಟು ಓದಿ :