Widgets Magazine

ಟಿವಿ ಜಾಹೀರಾತು ಚಿತ್ರೀಕರಣ ವೇಳೆ ತಮನ್ನಾ-ವಿರಾಟ್ ಕೊಹ್ಲಿ ಲವ್ ಆಗಿದ್ದು ನಿಜವೇ?!

ಮುಂಬೈ| Krishnaveni K| Last Modified ಶನಿವಾರ, 2 ಮಾರ್ಚ್ 2019 (09:21 IST)
ಮುಂಬೈ: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ವಿರಾಟ್ ಕೊಹ್ಲಿ ನಡುವೆ ಒಂದು ಕಾಲದಲ್ಲಿ ಲವ್ ಇತ್ತೇ? ಇಬ್ಬರೂ ಡೇಟಿಂಗ್ ಮಾಡಿದ್ದರೇ? ಈ ಪ್ರಶ್ನೆಗೆ ಸ್ವತಃ ತಮನ್ನಾ ಉತ್ತರಿಸಿದ್ದಾರೆ.

 
2012 ರಲ್ಲಿ ತಮನ್ನಾ ಹಾಗೂ ವಿರಾಟ್ ಮೊಬೈಲ್ ಫೋನ್ ಒಂದರ ಜಾಹೀರಾತಿನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಈ ಜಾಹೀರಾತಿನಲ್ಲಿ ವಿರಾಟ್ ತಮನ್ನಾರನ್ನು ಪಟಾಯಿಸುವ ದೃಶ್ಯವಿದೆ. ಆ ಸಂದರ್ಭದಲ್ಲಿ ಇವರಿಬ್ಬರ ನಡುವೆ ಏನೋ ಇದೆ ಎಂಬ ಗುಸು ಗುಸು ಹಬ್ಬಿತ್ತು. ಆದರೆ ಇಬ್ಬರೂ ಪ್ರತಿಕ್ರಿಯಿಸಿರಲಿಲ್ಲ.
 
ಈಗ ಸಂದರ್ಶನವೊಂದರಲ್ಲಿ ತಮನ್ನಾಗೆ ಇದೇ ಪ್ರಶ್ನೆ ಎದುರಾದಾಗ ಅಂದು ನಡೆದಿದ್ದನ್ನು ಹೇಳಿಕೊಂಡಿದ್ದಾರೆ. ‘ಚಿತ್ರೀಕರಣ ಸಮಯದಲ್ಲಿ ನಾನು ಕೊಹ್ಲಿ ಜತೆ ಆಡಿದ್ದು ನಾಲ್ಕೇ ಮಾತು. ಅದೂ ವೃತ್ತಿಗೆ ಸಂಬಂಧಿಸಿದ ಹಾಗೆ. ಅದರ ಹೊರತಾಗಿ ನಾವಿಬ್ಬರೂ ಮತ್ತೆ ಮಾತೂ ಆಡಲಿಲ್ಲ, ಸಂಪರ್ಕದಲ್ಲೂ ಇರಲಿಲ್ಲ. ಹಾಗೆ ನೋಡಿದರೆ ನನ್ನ ಜತೆ ನಟಿಸಿದ ಎಷ್ಟೋ ನಟರಿಗಿಂತ ಚೆನ್ನಾಗಿ ವಿರಾಟ್ ನನ್ನ ಜತೆ ನಡೆದುಕೊಂಡಿದ್ದರು’ ಎಂದು ತಮನ್ನಾ ಎಲ್ಲಾ ರೂಮರ್ಸ್ ಗಳಿಗೆ ಈಗ ತೆರೆ ಎಳೆದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :