ಕೆಎಲ್ ರಾಹುಲ್ ರ ಬೇಬಿ ಏಂಜಲ್ ಇವರೇ!

ಬೆಂಗಳೂರು| Krishnaveni K| Last Modified ಶನಿವಾರ, 27 ಫೆಬ್ರವರಿ 2021 (09:55 IST)
ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಯಿದೆ. ಇಬ್ಬರೂ ಜೊತೆಯಾಗಿ ಡಿನ್ನರ್ ಗೆ ತೆರಳುವುದು, ಸುತ್ತಾಟ ನಡೆಸುವುದು, ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿಕೊ‍ಳ್ಳುವುದು ಹೊಸದೇನೂ ಅಲ್ಲ.

 
ಇದೀಗ ರಾಹುಲ್ ತಮ್ಮ ಗೆಳತಿಯನ್ನು ‘ಬೇಬಿ ಏಂಜಲ್’ ಎನ್ನುವ ಮೂಲಕ ಅಥಿಯಾ ಮೇಲಿನ ಪ್ರೀತಿ ಹೊರ ಹಾಕಿದ್ದಾರೆ. ಅಥಿಯಾ ಮ್ಯಾಗಜಿನ್ ಒಂದರ ಕವರ್ ಪೇಜ್ ನಲ್ಲಿರುವ ತಮ್ಮ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಇದಕ್ಕೆ ಕಾಮೆಂಟಿಸಿರುವ ರಾಹುಲ್ ಮೈ ಬೇಬಿ ಏಂಜಲ್ ಎಂದು ತಮ್ಮ ಹುಡುಗಿಯನ್ನು ಮುದ್ದಾಗಿ ಕರೆದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :