ಲಂಡನ್: ವಿಶ್ವಕಪ್ ಆಡುತ್ತಿರುವ ಟೀಂ ಇಂಡಿಯಾದಲ್ಲಿ ಈಗ ಇಬ್ಬರು ಕನ್ನಡಿಗ ಬ್ಯಾಟ್ಸ್ ಮನ್ ಗಳು ಆಯ್ಕೆಯಾಗಿದ್ದಾರೆ. ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ವೃತ್ತಿ ಮಾತ್ರವಲ್ಲ, ಹೊರತಾಗಿಯೂ ಉತ್ತಮ ಸ್ನೇಹಿತರು.ಹೀಗಿರುವಾಗ ತನ್ನ ಸ್ನೇಹಿತ ತಂಡಕ್ಕೆ ಬರುತ್ತಿದ್ದಾನೆಂದರೆ ಕೆಎಲ್ ರಾಹುಲ್ ಗೆ ಖುಷಿಯಾಗಿಯೇ ಆಗುತ್ತದೆ. ಅದೇ ರೀತಿ ಟೀಂ ಇಂಡಿಯಾ ಪಾಳಯ ಸೇರಿಕೊಂಡ ಮಯಾಂಕ್ ಗೆ ರಾಹುಲ್ ಬೆಚ್ಚನೆಯ ಸ್ವಾಗತ ನೀಡಿದ್ದಾರೆ.ಟ್ವಿಟರ್ ಮೂಲಕ ಸ್ನೇಹಿತನನ್ನು ಸ್ವಾಗತಿಸಿದ ರಾಹುಲ್ ಆರಂಭದಿಂದಲೂ ಜತೆಯಾಗಿ ಪ್ರಾರಂಭಿಸಿದ್ದೇವೆ.