ಜಕಾರ್ತ: ಏಷ್ಯನ್ ಗೇಮ್ಸ್ ಕ್ರೀಡಾ ಕೂಟದಲ್ಲಿ ಇದೇ ಮೊದಲ ಬಾರಿಗೆ ಭಾರತಕ್ಕೆ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಟ್ಟರೂ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ತೃಪ್ತಿಯಾಗಿಲ್ಲವಂತೆ.ಎಲ್ಲರೂ ಸಿಂಧು ಸಾಧನೆಯನ್ನು ಕೊಂಡಾಡುತ್ತಿದ್ದರೆ ಸಿಂಧು ಮಾತ್ರ ಛೇ.. ಇನ್ನೂ ಸ್ವಲ್ಪ ತಾಳ್ಮೆಯಿಂದ ಆಡಿದ್ದರೆ.. ಎಂದು ತಮ್ಮನ್ನು ತಾವೇ ಹಳಿದುಕೊಳ್ಳುತ್ತಿದ್ದಾರೆ.ಹಾಗಿದ್ದರೂ ತೈಪೈ ಎದುರಾಳಿ ಝೂ ಯಿಂಗ್ ಸೋಲಿಸಲಾಗದ ಆಟಗಾರ್ತಿಯೇನೂ ಅಲ್ಲ. ಕೊಂಚ ಪರಿಶ್ರಮ, ತಾಳ್ಮೆ ಇದ್ದರೆ ಆಕೆಯನ್ನೂ ಸೋಲಿಸಬಹುದು ಎಂದು ಸಿಂಧು